2024-12-24 06:15:44

News broadcasting is the medium of broadcasting various news events and other information via television, radio, or the internet in the field of broadcast journalism.

Get In Touch

  • info@samayanews.tv
  • 8050000444
  • Samaya News, 48, 2nd Floor, 2nd Main, 2nd Cross, Ganganagar, Muthappa Block, RT Nagar, Bengaluru, Karnataka 560032

ಬೆಳಗಾವಿ-ಮೀರಜ್ ವಿಶೇಷ ಪ್ಯಾಸೆಂಜರ್ ರೈಲು ಸೇವೆ ಆರಂಭ

ಬೆಳಗಾವಿ: ಪಶ್ಚಿಮ ಘಟ್ಟಗಳಲ್ಲಿ ಭಾರೀ ಮಳೆ ಸುರಿಯುತ್ತಿರುವ ಕಾರಣ ರಸ್ತೆಗಳಿಗೆ ತೀವ್ರ ಹಾನಿಯಾಗಿದ್ದು, ಬೆಳಗಾವಿ ಹಾಗು ಮಹಾರಾಷ್ಟ್ರದ ಮೀರಜ್ ನಡುವೆ, ಪ್ರಯಾಣಿಕರಿಗೆ ಅನುಕೂಲವಾಗುವಂತೆ ವಿಶೇಷ ಪ್ಯಾಸೆಂಜರ್ ರೈಲು ಬಿಡಲಾಗಿದೆ.

ಬೆಳಗಾವಿ _ ಮೀರಜ್‌ ರೈಲು : ಪ್ರತಿದಿನ ಬೆಳಿಗ್ಗೆ 6.10ಕ್ಕೆ ಹೊರಟು 9.10ಕ್ಕೆ ಮೀರಜ್ ತಲುಪಲಿದೆ. ಮರಳಿ ಬೆಳಿಗ್ಗೆ 9.50ಕ್ಕೆ ಮೀರಜ್​ನಿಂದ ಹೊರಟು ಮಧ್ಯಾಹ್ನ 12.50ಕ್ಕೆ ಬೆಳಗಾವಿ ತಲುಪತ್ತದೆ. ಹಾಗು  ಮಧ್ಯಾಹ್ನ 1.30ರಿಂದ ಬೆಳಗಾವಿಯಿಂದ ಹೊರಟು ಸಂಜೆ 04.30ಕ್ಕೆ ಮೀರಜ್ ತಲುಪಲಿದೆ. ಮರಳಿ ಸಂಜೆ 05.35ಕ್ಕೆ ಮೀರಜ್​ನಿಂದ ಹೊರಟು ರಾತ್ರಿ 08.35ಕ್ಕೆ ಬೆಳಗಾವಿ ತಲುಪುತ್ತದೆ.

ಜುಲೈ 31ರಿಂದ ಆಗಸ್ಟ್ 4ರವರೆಗೆ ಬೆಳಗಾವಿ-ಮೀರಜ್ ರೈಲು ದಿನಕ್ಕೆ 2 ಬಾರಿ ಓಡಾಟ ನಡೆಸಲಿದೆ. ಪ್ರಯಾಣಿಕರು ವಿಶೇಷ ರೈಲಿನ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಮನವಿ ಮಾಡಿದ್ದಾರೆ.

Post a comment

No Reviews