
ಬೆಂಗಳೂರು: ಬಿಬಿಎಂಪಿಯ ಶಾಲಾ, ಕಾಲೇಜುಗಳ ಶೈಕ್ಷಣಿಕ ಅಭಿವೃದ್ಧಿಗಾಗಿ ಸಂಘ-ಸಂಸ್ಥೆಗಳ ಅಡಿಯಲ್ಲಿ ಅನುದಾನ ನೀಡಲು ಅವಕಾಶ ನೀಡಲಾಗುತ್ತದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತರು ತಿಳಿಸಿದ್ದಾರೆ.
ಪಾಲಿಕೆ ವ್ಯಾಪ್ತಿಯಲ್ಲಿರುವ 93 ಶಿಶುವಿಹಾರ, 16 ಪ್ರಾಥಮಿಕ, 33 ಪ್ರೌಢಶಾಲೆ, 18 ಪದವಿ ಪೂರ್ವ ಕಾಲೇಜು, 42 ಸ್ನಾತಕೋತ್ತರ ಕೇಂದ್ರಗಳು 25 ಸಾವಿರಕ್ಕೂ ಹೆಚ್ಚು ಬಡ ಹಾಗೂ ಎಲ್ಲಾ ವರ್ಗದ ಮಕ್ಕಳಿಗೆ ಉಚಿತ ವಿದ್ಯಾಭ್ಯಾಸ ನೀಡುತ್ತಿವೆ. ಈ ಶಾಲಾ-ಕಾಲೇಜುಗಳ ಶೈಕ್ಷಣಿಕ ಅಭಿವೃದ್ಧಿಗೆ ಆಸಕ್ತ ಸಂಘ-ಸಂಸ್ಥೆಗಳು, ಖಾಸಗಿ ಕಂಪನಿಗಳು ಇನ್ನು ಮುಂದೆ ಅನುದಾನ ನೀಡಬಹುದಾಗಿದೆ. ಇದಕ್ಕೆ ಬಿಬಿಎಂಪಿ ಅವಕಾಶ ಮಾಡಿಕೊಡುತ್ತಿದೆ ಎಂದು ಬಿಬಿಎಂಪಿಯ ಮುಖ್ಯ ಆಯುಕ್ತರು ಸುತ್ತೋಲೆಯಲ್ಲಿ ತಿಳಿಸಿದ್ದಾರೆ.
Poll (Public Option)

Post a comment
Log in to write reviews