2024-12-24 05:44:18

News broadcasting is the medium of broadcasting various news events and other information via television, radio, or the internet in the field of broadcast journalism.

Get In Touch

  • info@samayanews.tv
  • 8050000444
  • Samaya News, 48, 2nd Floor, 2nd Main, 2nd Cross, Ganganagar, Muthappa Block, RT Nagar, Bengaluru, Karnataka 560032

BBK11: ಕ್ಯಾಪ್ಟನ್ ಹಂಸಾಗೆ I Love U’ ಎಂದು ಕಾಲೆಳೆದ ಜಗದೀಶ್

​ಬಿಗ್​ ಬಾಸ್ ಕನ್ನಡ​​ ಸೀಸನ್​ 11: ದೊಡ್ಮನೆಯ ಮೊದಲ ವಾರದ ಕ್ಟಾಪ್ಟನ್‌ ಆಗಿರುವ ನಟಿ ಹಂಸಾ ಅವರಿಗೆ ಲಾಯರ್​ ಜಗದೀಶ್ (Jagadish)​ ಅವರ ಕಾಲೆಳೆಯಲು ಶುರು ಮಾಡಿದ್ದಾರೆ. ಅಷ್ಟೇ ಏಕೆ ‘ಐ ಲವ್​ ಯೂ ಕ್ಯಾಪ್ಟನ್’​ ಎಂದು ಹೇಳಿದ್ದಾರೆ.

ಲಾಯರ್​ ಜಗದೀಶ್​ ಕ್ಯಾಪ್ಟನ್​ ಹಂಸಾ ಅವರಿಗೆ ಕೋಪಿಸಿಕೊಳ್ಳುವಂತೆ ಮಾಡಿದ್ದಾರೆ. ಈ ವೇಳೆ ತಮಾಷೆಯ ಜೊತೆಗೆ ಕಾಲೆಳೆಯುತ್ತಿದ್ದಾರೆ. ಸಿಕ್ಕ ಸಿಕ್ಕ ವಸ್ತುಗಳನ್ನು ತಂದು ಕೊಡುವಂತೆ ಆಗ್ರಹಿಸಿದ್ದಾರೆ. ಅಷ್ಟು ಮಾತ್ರವಲ್ಲ ನನಗೆ ಚಿಕನ್​ ಮಂಚೂರಿ ಬೇಕು ಎಂದು ಜಗದೀಶ್​ರವರು ಹಂಸಾ ಬಳಿ ಕೇಳಿದ್ದಾರೆ.

ಇದಲ್ಲದೆ ಹಂಸಾ ಅವರನ್ನು ಹಂಸ್​ ಎಂದು ಕರೆದು ‘ಮಾರಿ ಕಣ್ಣು ಹೋರಿ ಮ್ಯಾಲೆ’, ನನ್ನ ಕಣ್ಣು ಅವಳ ಮೇಲೆ ಅವಳ ಕಣ್ಣು ನನ್ನ ಮೇಲೆ ಎಂದು ಹಾಡು ಹಾಡಿದ್ದಾರೆ..

ಹಂಸಾಗೆ ನಾನು ನಿಮ್ಮ ಫ್ಯಾನ್​​ ಎಂದು ಜಗದೀಶ್ ಹೇಳಿದ್ದಾರೆ. ಮುಂಗಾರು ಮಳೆ ಸಿನಿಮಾದಂತೆ ಹಂಸಾರವರು ಜಗದೀಶ್​ ಎದೆ ಮೇಲೆ ಕಾಲಿಟ್ಟು ನಡೆದಿದ್ದಾರೆ​​.

ಒಟ್ಟಿನಲ್ಲಿ ಇಂದಿನ ಎಪಿಸೋಡ್​ನಲ್ಲಿ ಜಗದೀಶ್​ ಮತ್ತು ಹಂಸಾ ನಡುವಿನ ಮಾತು, ಜಗಳ, ತಮಾಷೆ ಪ್ರೇಕ್ಷಕರ ಕಣ್ಣು ಕಟ್ಟುವಂತೆ ಮಾಡಲಿದೆ.

Post a comment

No Reviews