ಕರ್ನಾಟಕ
ಬೆಂಗಳೂರಿನಲ್ಲಿ ಯುವತಿಯ ಬರ್ಬರ ಹತ್ಯೆ ಲೇಡಿಸ್ ಪಿಜಿಯೊಳಗೆ ನುಗ್ಗಿ ಕತ್ತು ಕೊಯ್ದು ಹಂತಕ ಎಸ್ಕೇಪ್

ಬೆಂಗಳೂರು : ಲೇಡೀಸ್ ಪಿಜಿಗೆ ನುಗ್ಗಿ ಯುವತಿಯೊಬ್ಬಳ ಕತ್ತು ಕೊಯ್ದು ಬರ್ಬರವಾಗಿ ಹತ್ಯೆ ಮಾಡಿದ ಘಟನೆ ಸಿಲಿಕಾನ್ ಸಿಟಿಯಲ್ಲಿ ನಡೆದಿದೆ. ಮೃತ ಯುವತಿಯನ್ನ ಬಿಹಾರ ಮೂಲದ ಕೃತಿ ಕುಮಾರಿ ಎಂದು ಗುರುತಿಸಲಾಗಿದೆ.
ಕೋರಮಂಗಲದ ವಿಆರ್ ಲೇಔಟ್ನಲ್ಲಿರೋ ಪಿಜಿಯಲ್ಲಿ ರಾತ್ರಿ 11.10 ರಿಂದ 11.30 ಸುಮಾರಿಗೆ ಕೃತ್ಯ ನಡೆದಿದೆ. ಚಾಕುವಿನ ಜೊತೆಗೆ ಆಗಮಿಸಿದ್ದ ಯುವಕ, ಮೂರನೇ ಮಹಡಿಯಲ್ಲಿರುವ ರೂಂ ಸಮೀಪ ಚಾಕುವಿನಿಂದ ಹಲ್ಲೆ ಮಾಡಿ ಕೊಲೆ ಮಾಡಿದ್ದಾನೆ.
ಘಟನಾ ಸ್ಥಳಕ್ಕೆ ಕೋರಮಂಗಲ ಪೊಲೀಸರು, ಆಗ್ನೇಯ ವಿಭಾಗ ಡಿಸಿಪಿ ಸಾರಾ ಫಾತಿಮಾ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸಿಸಿಟಿವಿ ದೃಶ್ಯ ಆಧರಿಸಿ ಆರೋಪಿ ಯುವಕನ ಪತ್ತೆ ಹಚ್ಚುವ ಕಾರ್ಯ ಆರಂಭಗೊಂಡಿದೆ. ಪರಿಚಯಸ್ಥ ಯುವಕನೇ ಕೃತ್ಯ ನಡೆಸಿರುವ ಶಂಕೆ ವ್ಯಕ್ತವಾಗಿದೆ. ಕೋರಮಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Poll (Public Option)

Post a comment
Log in to write reviews