
ಬಾಂಗ್ಲಾದೇಶ: ಪತ್ರಕರ್ತೆ ಟಿವಿ ಆ್ಯಂಕರ್ ಸಾರಾ ರಹನುಮಾ ಮೃತದೇಹ ಢಾಕಾದ ಹತಿರ್ಜೀಲ್ ಕೆರೆಯಲ್ಲಿ ಪತ್ತೆಯಾಗಿದೆ.
ಸಾರಾ ಬಂಗಾಳಿ ಭಾಷೆಯ ಸುದ್ದಿವಾಹಿನಿಯ ನ್ಯೂಸ್‍ರೂಂ ಎಡಿಟರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ ಸಾರಾ ಮೃತದೇಹ ಪತ್ತೆಯಾಗುವ ಒಂದು ದಿನ ಮೊದಲು ಮಂಗಳವಾರ ಅವರ ತನ್ನ ಫೇಸ್‍ಬುಕ್‌ನಲ್ಲಿ ಮಾಡಿದ್ದ ಎರಡು ಪೋಸ್ಟ್ ಗಮನ ಸೆಳೆದಿದೆ.
ಮಂಗಳವಾರ ರಾತ್ರಿ ಮಾಡಿದ ಮೊದಲ ಪೋಸ್ಟ್ ನಲ್ಲಿ ಸಾರಾ, ‘ಸಾವಿಗೆ ಸಮಾನವಾದ ಜೀವನಕ್ಕಿಂದ ಸಾಯುವುದು ಉತ್ತಮ’ ಎಂದು ಬರೆದಿದ್ದರು. ಆ ಪೋಸ್ಟಿನ 12 ನಿಮಿಷದ ಬಳಿಕ ಮಾಡಿದ್ದ ಎರಡನೇ ಪೋಸ್ಟ್ ನಲ್ಲಿ ಫಹೀಮ್ ಫೈಸಲ್ ಎಂಬವರನ್ನು ಕುರಿತು ಹೊಗಳಿ ಬರೆದಿದ್ದರು `ನಿಮ್ಮಂತಹ ಸ್ನೇಹಿತನನ್ನು ಹೊಂದಲು ಸಂತೋಷವಾಗಿದೆ. ದೇವರು ನಿಮ್ಮ ಮೇಲೆ ಅಲ್ಲಾಹನ ಕೃಪೆ ಯಾವಾಗಲೂ ಇರುತ್ತದೆ. ನಾವು ಒಟ್ಟಿಗೆ ಸಾಕಷ್ಟು ಯೋಜನೆಗಳ ಕನಸು ಕಂಡಿದ್ದೆವು. ಕ್ಷಮಿಸಿ.. ನಮ್ಮ ಯೋಜನೆಗಳನ್ನು ಪೂರೈಸಲು ಆಗಲಿಲ್ಲ. ಅಲ್ಲಾಹ್ ನಿಮ್ಮನ್ನು ಆಶೀರ್ವದಿಸಲಿ’ ಎಂದು ಸಾರಾ ಬರೆದಿದ್ದರು.
ಮೃತದೇಹ ಪತ್ತೆಯಾದ ಬಳಿಕ ಆಕೆಯ ಗಂಡ “ನಾವಿಬ್ಬರೂ ವಿಚ್ಛೇದನ ಪಡೆಯುವ ಬಗ್ಗೆ ಯೋಚಿಸಿದ್ದೆವು ಎಂದು ಹೇಳಿರುವುದಾಗಿ ಬಾಂಗ್ಲಾದೇಶದ ಮಾಧ್ಯಮಗಳಲ್ಲಿ ವರದಿಯಾಗಿದೆ.
Poll (Public Option)

Post a comment
Log in to write reviews