
ಬಾಂಗ್ಲಾನಟಿ ರಿಷ್ತಾ ಲಬೊನಿ ಶಿಮಾನ ನಿಧನರಾಗಿದ್ದಾರೆ. 39ರ ಹರೆಯದ ನಟಿ ಸಾವಿನ ಸುದ್ದಿ ಅಭಿಮಾನಿಗಳಿಗೆ ಆಘಾತ ತಂದಿದೆ. ಬಾಂಗ್ಲಾದೇಶದ ನಟಿಯಾಗಿ ಗುರುತಿಸಿಕೊಂಡಿರುವ ರಿಷ್ತಾ ಮಿದುಳಿಗೆ ಸಂಬಂಧಿಸಿದ ಸಮಸ್ಯೆಯಿಂದ ಆಸ್ಪತ್ರೆ ದಾಖಲಾಗಿದ್ದರು.
ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದ ರಿಷ್ತಾ ಬುಧವಾರ ಮುಜೀಬ್ ಮೆಡಿಕಲ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ನಟಿ ಸಾವಿನ ಸುದ್ದಿಯನ್ನು ಸಹೋದರ ಇಜಾಜ್ ಬಿನ್ ಖಚಿತಪಡಿಸಿದ್ದಾರೆ.
ಮೇ 20ರ ವರೆಗೆ ಹಲವು ಕಾರ್ಯಕ್ರಮಗಲ್ಲಿ ಪಾಲ್ಗೊಂಡಿದ್ದ ರಿಷ್ತಾ, ಮೇ 21ರ ರಾತ್ರಿ ಏಕಾಏಕಿ ಅಸ್ವಸ್ಥಗೊಂಡಿದ್ದ ನಟಿಯನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ತಪಾಸಣೆ ನಡೆಸಿದ ವೈದ್ಯರು ತಕ್ಷಣ ಮತ್ತೊಂದು ಆಸ್ಪತ್ರೆಗೆ ಸ್ಥಳಾಂತರಿಸುವಂತೆ ಸೂಚಿಸಿ ಹೆಚ್ಚಿನ ಚಿಕಿತ್ಸೆಯ ಅಗತ್ಯವಿದೆ ಎಂದಿದ್ದರು. ನಂತರ ಮುಜೀಬ್ ಮೆಡಿಕಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಿನ್ನೆ ಚಿಕಿತ್ಸೆ ಫಲಿಸದೆ ರಿಷ್ತಾ ಮೃತಪಟ್ಟಿದ್ದಾರೆ.
ಬಾಂಗ್ಲಾದ ಹಲವು ಸಿನಿಮಾದಲ್ಲಿ ನಾಯಕಿಯಾಗಿ ರಿಷ್ತಾ ಕಾಣಿಸಿಕೊಂಡಿದ್ದಾರೆ. ಸೂಪರ್ ಹಿಟ್ ಚಿತ್ರಗಳನ್ನು ನೀಡಿದ ರಿಷ್ತಾ, ನಿಧನಕ್ಕೆ ಬಾಂಗ್ಲಾದೇಶ ಸಿನಿಮಾ ಜಗತ್ತು ಕಂಬನಿ ಮಿಡಿದಿದೆ.
Poll (Public Option)

Post a comment
Log in to write reviews