
ಮನೋರಂಜನೆಗಾಗಿ ಗೋವಾಕ್ಕೆ ತೆರಳಿದ್ದ ಚಲನಚಿತ್ರ ವಾಣಿಜ್ಯ ಮಂಡಳಿಯ ಕೆಲ ಸದಸ್ಯರು ಬಡಿದಾಡಿಕೊಂಡಿದ್ದು, ಇದಕ್ಕೂ ನಮಗೂ ಸಂಬಂಧವಿಲ್ಲ ಎಂದು ಮಂಡಳಿ ಸ್ಪಷ್ಟಪಡಿಸಿದೆ.
ಗೋವಾಕ್ಕೆ ಹೋದ ಮೇಲೆ ಸುಮ್ಮನಿರಲು ಸಾಧ್ಯವೇ? ಅಲ್ಲಿಗೆ ಹೋಗಿದ್ದವರಲ್ಲಿ ಕೆಲವರು ಮಧ್ಯಾಹ್ನವೇ ಕುಡಿಯಲು ಶುರು ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಈ ಪಾರ್ಟಿಯಲ್ಲಿ ನಿರ್ಮಾಪಕರ ಸಂಘದವರೂ ಇದ್ದರು. ಹೊಡೆದಾಟ ನಡೆದಿರುವುದು ಅವರ ಮಧ್ಯೆಯೇ.
ಗೋವಾದಲ್ಲಿ ಮದ್ಯ ಕುಡಿದು ಬೀಚಿನಲ್ಲಿ ಸಂಭ್ರಮಿಸುವುದು ಮಾಮೂಲಿ. ಕಟ್ಟುನಿಟ್ಟಿನ ಕಾನೂನಿದ್ದರೂ ರಾತ್ರಿ 10 ರ ನಂತರ ಇವಕ್ಕೆಲ್ಲ ಕಡಿವಾಣವಿದೆ. ಇದೇ ರೀತಿ ಬೆಂಗಳೂರಿನಿಂದ ತೆರಳಿದ್ದ ನಿರ್ಮಾಪಕ ಎ ಗಣೇಶ್, ರಥಾವರ ಮಂಜು ಹಾಗೂ ಸತೀಶ್ ಮಧ್ಯೆ ಪಾರ್ಟಿಯಲ್ಲಿ ಹೊಡೆದಾಟವಾಗಿದೆ ಎನ್ನಲಾಗಿದೆ.
ಪಾರ್ಟಿಯಲ್ಲಿ ಕುಳಿತಿದ್ದ ನಿರ್ಮಾಪಕ ಗಣೇಶ್, 9.30ಕ್ಕೆಲ್ಲ ಪಾರ್ಟಿ ಮುಕ್ತಾಯ ಮಾಡಿ ಎಂದು ತಮ್ಮೊಂದಿಗೆ ಇದ್ದವರಿಗೆ ಮನವಿ ಮಾಡಿದ್ದಾರೆ. ಈ ವೇಳೆ ಸತೀಶ್ ಮತ್ತು ರಥಾವರ ಮಂಜು ಮಧ್ಯೆ ಮಾತಿಗೆ ಮಾತು ಬೆಳೆದು ಸತೀಶ್, ಟೇಬಲ್ ಮೇಲಿದ್ದ ಪ್ಲೇಟ್ ಎತ್ತಿಕೊಂಡು ರಥಾವರ ಮಂಜುಗೆ ತಲೆಗೆ ಬಲವಾಗಿ ಹೊಡೆದಿದ್ದಾರೆ.ರಥಾವರ ಮಂಜುಗೆ ರಕ್ತ ಬರುವುದಕ್ಕೆ ಶುರುವಾಗಿದೆ.
ಈ ಇಬ್ಬರ ಗಲಾಟೆ ಬಿಡಿಸಲು ಹೋದ ಗಣೇಶ್ ಅವರಿಗೂ ಹೊಡೆತ ಬಿದ್ದಿದೆ. ಅಲ್ಲದೆ ಚಮಚದಿಂದ ಹೊಡೆಯಲು ಹೋದಾಗ ತಪ್ಪಿಸಿಕೊಂಡಿದ್ದು ಕಣ್ಣು ಕುರುಡಾಗುವುದು ಸ್ವಲ್ಪದರಲ್ಲಿಯೇ ತಪ್ಪಿತು ಎನ್ನುತ್ತಾರೆ ಪ್ರತ್ಯಕ್ಷದರ್ಶಿಗಳು.
ಇವರ ಮಧ್ಯೆ ಇಷ್ಟೆಲ್ಲ ಗಲಾಟೆ ನಡೆಯುವಾಗ ಮಂಡಳಿಯ ಬಹುತೇಕ ಸದಸ್ಯರು, ಪದಾಧಿಕಾರಿಗಳು ಪಾರ್ಟಿಯಲ್ಲಿ ಇರಲಿಲ್ಲ. ನಿರ್ಮಾಪಕರ ಸಂಘದ ಕಾರ್ಯದರ್ಶಿ ಡಿ.ಕೆ.ರಾಮಕೃಷ್ಣ ಪ್ರಕಾರ ಗಲಾಟೆ ಶುರುವಾಗಿದ್ದು ಹಾಗೂ ಇಷ್ಟೆಲ್ಲ ರಂಪಕ್ಕೆ ಕಾರಣವಾಗಿದ್ದು ಸತೀಶ್. ರಥಾವರ ಮಂಜು ಹಾಗೂ ಗಣೇಶ್ ಅವರಿಗೆ 20ಕ್ಕೂ ಹೆಚ್ಚು ಹೊಲಿಗೆ ಬಿದ್ದಿವೆ. ಪ್ರರಕಣ ಸಂಬಂಧ ಈ ಘಟನೆಗೂ ಮಂಡಳಿಯ ಸದಸ್ಯರಿಗೂ ಸಂಬಂಧವಿಲ್ಲ ಎಂದು ಸ್ಟಪ್ಟಪಡಿಸಿದೆ.
Poll (Public Option)

Post a comment
Log in to write reviews