
ಗದಗ: ಅಕ್ಕನಿಗೆ ಕಿರುಕುಳ ಕೊಟ್ಟ ಹಿನ್ನಲೆ ರೊಚ್ಚಿಗೆದ್ದ ಬಾಮೈದ, ಭಾವನಿಗೆ ಡೀಸೆಲ್ ಹಾಕಿ ಕೊಲೆ ಮಾಡಲು ಯತ್ನಿಸಿದ ಘಟನೆ ಜಿಲ್ಲೆಯ ರೋಣ ಪಟ್ಟಣದಲ್ಲಿ ನಡೆದಿದೆ.
ಆರು ತಿಂಗಳ ಹಿಂದಷ್ಟೆ ಪ್ರೀತಿ ಮಾಡಿ ಮದುವೆ ಆಗಿದ್ದರು. ಆದರೆ, ಆರೇ ತಿಂಗಳಲ್ಲಿ ಇವರ ಪ್ರೀತಿ ಕೊನೆಯಾಗಿದೆ. ಹೌದು, ಪ್ರೀತಿ ಮಾಡಿ ಮದುವೆಯಾದ ಯುವತಿ ಜೊತೆ ರಾಕ್ಷಸನಂತೆ ನಡೆದುಕೊಂಡಿದ್ದಾನೆ. ಈ ಹಿನ್ನಲೆ ನೊಂದ ಯುವತಿ, ತವರು ಮನೆಗೆ ಬಂದಿದ್ದಳು. ಈ ಹಿನ್ನೆಲೆಯಲ್ಲಿ ಮನನೋಂದ ಅಳಿಯ, ಭಾವನಿಗೆ ಡೀಸೆಲ್ ಸುರಿದು ಬೆಂಕಿ ಹಚ್ಚಿ ಕೊಲೆ ಮಾಡಲು ಯತ್ನಿಸಿದ್ದ. ಆದರೆ ಪ್ರಯತ್ನ ವಿಫಲವಾದಾಗ ಭಾವ ಜಗದೀಶ್‌ಗೆ ಚಾಕುವಿನಿಂದ ಬೇಕಾಬಿಟ್ಟಿ ಇರಿದಿದ್ದಾನೆ.
ಕೂಡಲೇ ಜಗದೀಶ್‌ಗೆ ಗದಗ ಜಿಮ್ಸ್ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಇದಾದ ಬಳಿಕ ಹಿರಿಯರ ಸಮ್ಮುಖದಲ್ಲಿ ಯುವಕ, ಯುವತಿ ಪ್ರತ್ಯೇಕವಾಗಿದ್ದರು. ಜೊತೆಗೆ ಇದೇ ವೇಳೆ ಎರಡು ಕುಟುಂಬಗಳು ಜಗಳವಾಡದಂತೆ ತಾಕೀತು ಕೂಡ ಮಾಡಲಾಗಿತ್ತು.
Poll (Public Option)

Post a comment
Log in to write reviews