‘ಬಿಗ್ ಬಾಸ್ ಕನ್ನಡ ಸೀಸನ್ 11’ ಈಗಾಗಲೇ ಆರಂಭವಾಗಿದ್ದು, ಸೆಪ್ಟೆಂಬರ್ 29ರಂದು ಗ್ರ್ಯಾಂಡ್ ಓಪನಿಂಗ್ ಸಿಕ್ಕಿದೆ. ವಿವಿಧ ಕ್ಷೇತ್ರಗಳ ಹಲವು ಸ್ಪರ್ಧಿಗಳು ‘ಬಿಗ್ ಬಾಸ್ʼಗೆ ಎಂಟ್ರಿ ಕೊಟ್ಟಿದ್ದಾರೆ. ಈ ಬಾರಿಯ ಬಿಗ್ಬಾಸ್ ಸ್ವರ್ಗ-ನರಕ ಕಾನ್ಸೆಪ್ಟ್ನಲ್ಲಿ ಮೂಡಿ ಬಂದಿದೆ. ಆದರೆ, ಈ ಬಾರಿ ಒಂದು ಬ್ಯಾಡ್ ನ್ಯೂಸ್ ಕೂಡ ಇರಲಿದೆ.
ಬಿಗ್ ಬಾಸ್ ಕನ್ನಡ 11 ನೇ ಸೀಸನ್ಗೆ ದೊಡ್ಡ ಮಟ್ಟದ ಓಪನಿಂಗ್ ಕೂಡ ಸಿಕ್ಕಿದ್ದು, ಒಟ್ಟೂ 17 ಮಂದಿ ಈ ಬಾರಿ ದೊಡ್ಮನೆ ಸೇರಿದ್ದಾರೆ. ಈ ಬಾರಿ ನರಕ-ಸ್ವರ್ಗ ಕಾನ್ಸೆಪ್ಟ್ನಲ್ಲಿ ಬಿಗ್ ಬಾಸ್ ಮೂಡಿ ಬಂದಿದೆ. ಈಗ ಬಿಗ್ ಬಾಸ್ ವೀಕ್ಷಕರಿಗೆ ಮೊದಲ ದಿನವೇ ಬ್ಯಾಡ್ ನ್ಯೂಸ್ ಸಿಕ್ಕಿದೆ.
ಹಾಗದರೆ ಆ ಬ್ಯಾಡ್ ನ್ಯೂಸ್ ಏನು?
ಬಿಗ್ ಬಾಸ್ ಕನ್ನಡ ಈ ಬಾರಿ ಕಲರ್ಸ್ ಕನ್ನಡ ಹಾಗೂ ಜಿಯೋ ಸಿನಿಮಾದಲ್ಲಿ ಮಾತ್ರ ಪ್ರಸಾರ ಕಾಣುತ್ತಿದೆ. ‘ಬಿಗ್ ಬಾಸ್ʼಗೆ 24 ಗಂಟೆ ಲೈವ್ ನೀಡಲಾಗುತ್ತಿತ್ತು. ಎಪಿಸೋಡ್ಗಿಂತ ಮೊದಲೇ ಬಿಗ್ ಬಾಸ್ ನೋಡಬಹುದು ಎಂದು ಪ್ಲ್ಯಾನ್ ಮಾಡಿದ್ದ ವೀಕ್ಷಕರಿಗೆ ತೀರಾ ಬೇಸರದ ವಿಷಯವಾಗಿದೆ.
ಕಳೆದ ವರ್ಷ ‘ಬಿಗ್ ಬಾಸ್ʼ ಲೈವ್ ನೀಡಿದಾಗ ಕೆಲವು ತೊಂದರೆಗಳು ಕೂಡ ಎದುರಾಗಿದ್ದವು. ಇದು ಅನೇಕರಿಗೆ ಬೇಸರ ಮೂಡಿಸಿತ್ತು. ಅನೇಕರು ಇದರ ಬಗ್ಗೆ ಅಪಸ್ವರ ತೆಗೆದಿದ್ದರು. ಹಾಗಾಗಿ ಈ ಬಾರಿ ಲೈವ್ ಪ್ರಸಾರವನ್ನು ತಡೆದು ರಾತ್ರಿ ಒಂದೂವರೆ ಗಂಟೆ ತೋರಿಸುವ ಎಪಿಸೋಡ್ನೇ ಎಲ್ಲರೂ ನೋಡಬೇಕು.
ಸ್ವರ್ಗ-ನರಕ ಕಾನ್ಸೆಪ್ಟ್ನಲ್ಲಿ ಯಾರೆಲ್ಲಾ ಇದ್ದಾರೆ?
ʻಬಿಗ್ ಬಾಸ್ ಕನ್ನಡ ಸೀಸನ್ 11’ರಲ್ಲಿ ಈ ಬಾರಿ ಸ್ವರ್ಗ ನರಕ ಕಾನ್ಸೆಪ್ಟ್ನಲ್ಲಿ ಇದೆ. 10 ಜನ ಸ್ವರ್ಗ ಹಾಗೂ 7 ಜನ ನರಕದಲ್ಲಿ ಇದ್ದಾರೆ. ಭವ್ಯಾ ಗೌಡ, ಯಮುನಾ ಶ್ರೀನಿಧಿ, ಧನರಾಜ್ ಆಚಾರ್, ಗೌತಮಿ ಜಾಧವ್, ಅನುಷಾ ರೈ, ಧರ್ಮಕೀರ್ತಿರಾಜ್, ಲಾಯರ್ ಜಗದೀಶ್, ಶಿಶಿರ್, ತ್ರಿವಿಕ್ರಂ, ಹಂಸ, ಮಾನಸಾ, ಗೋಲ್ಡ್ ಸುರೇಶ್, ಐಶ್ವರ್ಯಾ ಸಿಂಧೋಗಿ, ಚೈತ್ರಾ ಕುಂದಾಪುರ್, ಉಗ್ರಂ ಮಂಜು, ಮೋಕ್ಷಿತಾ ಪೈ, ರಂಜಿತ್ ಕುಮಾರ್ ಬಿಗ್ ಬಾಸ್ ಮನೆಯಲ್ಲಿ ಇದ್ದಾರೆ.
Post a comment
Log in to write reviews