ಕರ್ನಾಟಕ
ಬಿ.ನಾಗೇಂದ್ರ ನ ಇ.ಡಿ ಕಸ್ಟಡಿ ನಾಳೆಗೆ ಅಂತ್ಯ ಇಂದೇ ಹೋಟೆಲ್ಗೆ ಕರೆದೊಯ್ದು ಸ್ಥಳ ಮಹಜರ್ ಮಾಡುವ ಸಾಧ್ಯತೆ

ಬೆಂಗಳೂರು : ವಾಲ್ಮೀಕಿ ನಿಗಮದಲ್ಲಿನ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಬಿ. ನಾಗೇಂದ್ರ ಅವರನ್ನು ಜಾರಿ ನಿರ್ದೇಶನಾಲಯ ಅಧಿಕಾರಿಗಳು ಬಂಧಿಸಿದ್ದಾರೆ. ಇ.ಡಿ ಕಸ್ಟಡಿಯಲ್ಲಿರುವ ಮಾಜಿ ಸಚಿವ ನಾಗೇಂದ್ರರ ಕಸ್ಟಡಿ ಅಂತ್ಯಕ್ಕೆ ಒಂದೇ ದಿನ ಬಾಕಿ ಇರುವುದರಿಂದ ಇಂದೇ ನಾಗೇಂದ್ರರನ್ನು ಕರೆದೊಯ್ದು ಸ್ಥಳ ಮಹಜರ್ ಮಾಡುವ ಸಾಧ್ಯತೆಯಿದೆ.
ಈಗಾಗಲೇ ಈ ಪ್ರಕರಣಕ್ಕೆ ಸಂಬಂಧಿಸಿಂತೆ ಇ.ಡಿ ಬಂಧನದಲ್ಲಿರುವ ನಾಗೇಂದ್ರಗೆ ಅಧಿಕಾರಿಗಳು ಫುಲ್ ಡ್ರಿಲ್ ಮಾಡ್ತಿದ್ದಾರೆ. ಅಧಿಕಾರಿಗಳ ಪ್ರಶ್ನೆಗೆ ಉತ್ತರಿಸಿದ ನಾಗೇಂದ್ರ ನನಗೇನು ಗೊತ್ತಿಲ್ಲ ಅನ್ನೋ ವರಸೆಯನ್ನು ಮುಂದುವರಿಸಿದ್ದಾರಂತೆ.
ಇನ್ನು ಬಿ.ನಾಗೇಂದ್ರ ಶಾಂಗ್ರಿಲಾ ಹೋಟೆಲ್ನಲ್ಲಿ ನಿಗಮದ ಎಮ್‌ಡಿ ಪದ್ಮನಾಭ, ಲೆಕ್ಕಾಧಿಕಾರಿ ಪರಶುರಾಮ್ ಜೊತೆ ರಹಸ್ಯ ಸಭೆ ಮಾಡಿದ್ದ ಮಾಹಿತಿ ಇದೆ. ಈ ಹಿನ್ನೆಲೆಯಲ್ಲಿ ಸಭೆ ನಡೆದಿದ್ದ ಹೋಟೆಲ್ಗೆ ಇಡಿ ಅಧಿಕಾರಿಗಳು ನಾಗೇಂದ್ರರನ್ನು ಕರೆದೊಯ್ದು ಮಹಜರ್ ಮಾಡುವ ಸಾಧ್ಯತೆಯಿದೆ.
Poll (Public Option)

Post a comment
Log in to write reviews