
ಗಜೇಂದ್ರಗಡ: ನಿಯಮ ಉಲ್ಲಂಘಿಸಿ ಹೆಲ್ಮೆಟ್, ಲೈಸೆನ್ಸ್, ಇನ್ಸೂರೆನ್ಸ್ ಧರಿಸದೆ ಬಂದ ಬೈಕ್ ಸವಾರರಿಗೆ ಪೊಲಿಸರು ತಡೆದು 500, 1 ಸಾವಿರ ದಂಡ ಹಾಕುವ ಮೂಲಕ ಜಾಗೃತಿಗೊಳಿಸಿದರು.
ನಗರದ ರೋಣ ರಸ್ತೆಯ ಪೂರ್ತಿಗೇರಿ ಕ್ರಾಸ್, ಕುಷ್ಟಗಿ ರಸ್ತೇ, ಚೆನ್ನಮ್ಮ ಕ್ರಾಸ್ನ ಯಲಬುರ್ಗಿ ರಸ್ತೆ ಗಳಲ್ಲಿ ಇಂದು ನರಗುಂದ ವಲಯದ ಡಿವೈಎಸ್‌ಪಿ ಪ್ರಭುಗೌಡ ಕಿರೀದಳ್ಳಿ ಅವರ ನೇತೃತ್ವದಲ್ಲಿ ಸ್ಥಳೀಯ ಠಾಣಾದ ಪಿಎಸ್ಐ ಸೋಮನಗೌಡ, ರೋಣ ವಲಯದ ಸಿಪಿಐಎಸ್ಎಸ್ ಬೀಳಗಿ ಹಾಗೂ ಸ್ಥಳೀಯ ಪೊಲೀಸ್ ಸಿಬ್ಬಂದಿಗಳೊಂದಿಗೆ ಕಾರ್ಯಾಚರಣೆಯ ಮೂಲಕ ಹೆಲ್ಮೆಟ್ ಧರಿಸದೆ ಬೈಕ್ ಚಲಾಯಿಸುತ್ತಿದ್ದ ಸವಾರರನ್ನು ತಡೆದು 500 ರೂಪಾಯಿ ದಂಡದೊಂದಿಗೆ ಹೆಲ್ಮೆಟ್ ಧರಿಸುವಂತೆ ಜಾಗೃತಿಗೊಳಿಸಿದರು.
ಅಲ್ಲದೆ ಲೈಸೆನ್ಸ್, ಇನ್ಸೂರೆನ್ಸ್ ಇಲ್ಲದ ಸವಾರರಿಗೆ 1 ಸಾವಿರ ದಂಡ ವಿಧಿಸಲಾಯಿತು ಜೊತೆಗೆ ವೈಯಕ್ತಿಕ ಸಂರಕ್ಷಣೆಯೊಂದಿಗೆ ಅಮೂಲ್ಯವಾದ ಜೀವ ರಕ್ಷಣೆ ಮಾಡಿಕೊಳ್ಳಲು ಪ್ರತಿಯೊಬ್ಬರು ಕಡ್ಡಾಯವಾಗಿ ಹೆಲ್ಮೆಟ್ ಧರಿಸುವಂತೆ ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಸ್ಥಳೀಯ ಪೊಲೀಸ್ ಸಿಬ್ಬಂದಿ ಬೈಕ್ ಸವಾರರಿಗೆ ಜಾಗೃತಿಗೊಳಿಸಿದ್ದಾರೆ.
200ಕ್ಕು ಹೆಚ್ಚಿನ ವಾಹನಗಳನ್ನು ತಡೆದು ದಂಡದೊಂದಿಗೆ ಜಾಗೃತಿ ಮೂಡಿಸಿದರು.
Poll (Public Option)

Post a comment
Log in to write reviews