
ರಾಮನಗರ ಜಿಲ್ಲೆ ಹಾಗೂ ಚನ್ನಪಟ್ಟಣ ತಾಲೂಕು ಅಭಿವೃದ್ಧಿಗೆ ಸದಾ ಪಣತೊಟ್ಟಿರೋದಾಗಿ ಕಾಂಗ್ರೆಸ್ ಅಭ್ಯರ್ಥಿ ಸಿಪಿ ಯೋಗೇಶ್ವರ್ ಹೇಳಿದ್ದಾರೆ. ಇನ್ನೂ ನಾಮಪತ್ರ ಸಲ್ಲಿಕೆಗೂ ಮುನ್ನ ಮಾಧ್ಯಮರೊಂದಿಗೆ ಮಾತನಾಡಿದ ಅವರು, ಎಂಪಿ ಚುನಾವಣೆಯಲ್ಲಿ ಕಾಂಗ್ರೆಸ್ ವಿರುದ್ಧ ಹೋರಾಟ ಮಾಡಿದೆ. ಕುಮಾರಸ್ವಾಮಿ ಎಲೆಕ್ಷನ್ ಮುಗಿದ ಬಳಿಕ ವರಸೆ ಬದಲಿಸಿದ್ರು. ಯಾವಾಗ ಟಿಕೆಟ್ ಬಗ್ಗೆ ಕೇಳಿದ್ರೂ ಹಾರಿಕೆ ಉತ್ತರ ಕೊಟ್ಟಿದ್ದಾರೆ.
ಹೀಗಾಗಿಯೇ ಕಾಂಗ್ರೆಸ್ ಗೆ ಸೇರ್ಪಡೆಯಾಗಿ ಎಲೆಕ್ಷನ್ ನಲ್ಲಿ ಸ್ಪರ್ಧೆ ಮಾಡುತ್ತಿದ್ದೇನೆ. ಡಿಕೆಶಿ ಹಾಗೂ ನನ್ನ ನಡುವೆ ಯಾವುದೇ ವೈಯಕ್ತಿಕ ಆಸ್ತಿ ಜಗಳ ಇಲ್ಲ. ಜಿಲ್ಲೆಯ ಅಭಿವೃದ್ಧಿ ಸಂಬಂಧ ರಾಜಕೀಯ ಜಟಾಪಟಿ ಇತ್ತು. ಈಗ ಎಲ್ಲವನ್ನ ಮರೆತು ಚನ್ನಪಟ್ಟಣದ ಅಭಿವೃದ್ಧಿಯೇ ಒಂದಾಗಿದ್ದೇವೆ. ಪರ ಜಿಲ್ಲೆಯವರ ಆಕ್ರಮಣಕ್ಕೆ ಕಡಿವಾಣ ಹಾಕುತ್ತೇವೆ ಎಂದರು.
Poll (Public Option)

Post a comment
Log in to write reviews