ಇಂದು ನಾವು ನಿಮ್ಮ ಮುಂದೆ ತರುತ್ತಿರುವ ವಿಷಯ ಇತಿಹಾಸದಲ್ಲಿ ಮುಚ್ಚಿಹೋದ ಎದೆ ನಡುಗುವ ಘಟನೆ. ಈಶಾನ್ಯ ಭಾರತಕ್ಕೆ ಗಡಿ ಹಂಚಿಕೊಂಡ ಮ್ಯಾನ್ಮಾರ್ ದೇಶದಲ್ಲಿ ಏಳು ವರ್ಷದ ಹಿಂದೆ ಈ ಮಾರಣ ಹೋಮ ನಡೆದಿದೆ.
ಅಂದು ಆಗಸ್ಟ್ 25 – 2017 ಸಮಯ ಮುಂಜಾನೆ 8 ಗಂಟೆ. ಮ್ಯಾನ್ಮಾರ್ ನ ಪಶ್ಚಿಮ ಗಡಿಗೆ ಸಮೀಪಿಸಿದ ಆಹ್ ನೌಕ್ ಖಾ ಮೌಂಗ್ ಸೀಕ್ ಎಂಬ ಸಣ್ಣ ಗ್ರಾಮದಲ್ಲಿ ಜನ ಎಂದಿನಂತೆ ತಮ್ಮ ದಿನಚರಿಯಲ್ಲಿ ತೊಡಗಿದ್ದರು. ಸದಾ ಹಿಂಸಾಚಾರ ಕೋಮು ಗಲಾಭೆಯಲ್ಲಿ ಹೊತ್ತಿ ಉರಿಯುತ್ತಿದ್ದ ರುದ್ರ ನಗರವು ಅಂದು ಅಕ್ಷರಶಹ ನರಕವಾಗಿ ಹೋಗಿತ್ತು.
ಮ್ಯಾನ್ಮಾರ್ ಬೌದ್ಧ ಜನಾಂಗ ಹಾಗು ಸರ್ಕಾರದಿಂದ ಬಹುದಶಕಗಳಿಂದ ಶೋಷಣೆಗೊಳಗಾಗುತ್ತಿರುವ ರೋಹಿಂಗ್ಯಾ ಮುಸಲ್ಮಾನ ಸಮುದಾಯದ ರಕ್ಷಣೆಗೆಂದು ರಚನೆಯಾದ ARSA Arakan Rohingya Solidarity Army ಸಶಸ್ತ್ರ ಗುಂಪು ಅಂದು ಆ ಹಳ್ಳಿಯ 99 ಹಿಂದೂಗಳನ್ನು ಬರ್ಬರವಾಗಿ ಹತ್ಯೆಮಾಡಿತು.
ಕಪ್ಪು ಬಟ್ಟೆಗಳನ್ನು ಧರಿಸಿದ ARSA ಸಶಸ್ತ್ರ ಗುಂಪು ಸ್ಥಳೀಯ ರೊಹಿಂಗ್ಯಾ ಮುಸಲ್ಮಾನರೊಂದಿಗೆ ಸೇರಿಕೊಂಡು ಹಿಂದೂ ಮಹಿಳೆ, ಪುರುಷರು ಮತ್ತು ಮಕ್ಕಳನ್ನು ಸುತ್ತುವರೆದು ಹಳ್ಳಿಯ ಹೊರವಲಯಕ್ಕೆ ಎಳೆದೊಯ್ದರು. ಎಲ್ಲರ ಕಣ್ಣಿಗೆ ಕಪ್ಪು ಬಟ್ಟೆ ಕಟ್ಟಿ ದರೋಡೆ ಮಾಡಿ, ಪುರುಷ ಮಹಿಳೆ ಮತ್ತು ಚಿಕ್ಕ ಮಕ್ಕಳನ್ನು ಬೇರ್ಪಡಿಸಿದರು. ಭಯ ಭೀತಿಯಲ್ಲಿ ತಮಗೇನಾಗುತ್ತಿದೆ ಎಂದು ನಡುಗುತ್ತಿದ್ದ ಹಿಂದೂಗಳು ವಿಷಯ ತಿಳಿಯುವ ಮುನ್ನವೇ ಭಯಾನಕವಾಗಿ ಹತ್ಯೆಯಾಗ್ಗಿದ್ದರು.
ಬಲಿ ಸಾಲಿನಲ್ಲಿದ್ದವರ ಪೈಕಿ ಬಲಾತ್ಕಾರಕ್ಕೊಳಗಾಗಿ ಇಸ್ಲಾಮ್ಗೆ ಮತಾಂತರಗೊಂಡ ಎಂಟು ಮಹಿಳೆಯರಲ್ಲೊಬ್ಬಳಾದ Farmila (20) ಎಂಬ ಸಂತ್ರಸ್ಥೆ ತಾನು ನೋಡಿದ ಘೋರ ದೃಶ್ಯವನ್ನು ಹಂಚಿಕೊಂಡಿದ್ದಾಳೆ,
"ARSA ಹೋರಾಟಗಾರರು ಮಹಿಳೆ ಮತ್ತು ಮಕ್ಕಳನ್ನು ಕೊಂದು ಇತರೆ ಪುರುಷ ಮತ್ತು ಮಹಿಳೆಯರ ಕೂದಲು ಎಳೆದು ಕುತ್ತಿಗೆ ಸೀಳುತ್ತಿದ್ದರು, ನನ್ನನ್ನು ಬೆದರಿಸಿ ಬಲಾತ್ಕಾರ ಮಾಡಿ ಇಸ್ಲಾಂಗೆ ಮತಾಂತರಗೊಳ್ಳುವಂತೆ ಮಾಡಿದರು”.
ಈ ಭೀತಿಯಲ್ಲಿಯೇ ತಂಡದ ಒಬ್ಬ ದಾಳಿಕೋರನನ್ನು Bina Baala ಎಂಬ ಮಹಿಳೆ ಪ್ರಶ್ನಿಸಿದ್ದಕ್ಕೆ ಆತ
'ನಿಮಗೂ ಮ್ಯಾನ್ಮಾರ್ ನ ಬೌದ್ಧ ಜನಾಂಗಕ್ಕೂ ವ್ಯತ್ಯಾಸ ಇಲ್ಲ, ನೀವು ಇಲ್ಲಿ ಇರಲು ಸಾಧ್ಯವಿಲ್ಲ’ ಎಂದನು.
ಈ ಘಟನೆಯು ಜಗತ್ತಿನಾದ್ಯಂತ ನಡೆದ ನರಮೇಧಗಳ ಪಟ್ಟಿಗೆ ಸೇರದೆ ಹೋಗಿರುವುದು ಅತ್ಯಂತ ಶೋಚನೀಯ, ಆದರೂ ಲಕ್ಷಾಂತರ ರೋಹಿಂಗ್ಯಾ ಮುಸಲ್ಮಾನರು ಶೋಷಣೆ ಗೊಳಗಾಗುತ್ತಿರುವ ಸಮಸ್ಯೆ ಇಂದಿಗೂ ಬಗೆಹರಿಯದೆ ಉಳಿದಿದೆ.
Tags:
- India News
- Kannada News
- innocent
- allen tsai
- allen tsai did you know
- usc student cleared rape charge
- les trent
- brooklyn teen killed
- morbius post credits
- crime procedure
- indian predator trailer telugu
- killed
- gunfire erupts at basketball game
- worst serial killers
- parents
- police officer killed
- 19-year-old woman has been arrested
- killed a 20-year-old man
- scariest serial killers
- cop killed
Post a comment
Log in to write reviews