
ಬೆಂಗಳೂರು: ಮಾನಸಿಕ ಅಸ್ವಸ್ಥನೊಬ್ಬ ಆತ್ಮಹತ್ಯೆಗೆ ಯತ್ನಿಸಿ ಬೆದರಿಕೆಯೊಡ್ಡುತ್ತಿರುವ ಘಟನೆ ಶೇಷಾದ್ರಿಪುರಂ ಕಾಲೇಜಿನ ಹಿಂಭಾಗದಲ್ಲಿ ನಡೆದಿದೆ.
ಇಂದು (ಆಗಸ್ಟ್ 08) ಶೇಷಾದ್ರಿಪುರಂ ಕಾಲೇಜು ಹಿಂಬಾಗದಲ್ಲಿ, ನಿರ್ಮಾಣ ಹಂತದಲ್ಲಿರುವ ನಾಲ್ಕು ಅಂತಸ್ಥಿನ ಬಿಲ್ಡಿಂಗ್ ಮೇಲೆ ನಿಂತು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಒಡ್ಡುತ್ತಿದ್ದಾನೆ. ಯುವಕನ ಮನವೊಲಿಸಲು ಪೊಲೀಸರು ಹರಸಾಹಸ ಪಡುತ್ತಿದ್ದಾರೆ. ಆದರೆ ಮಾನಸಿಕ ಅಸ್ವಸ್ಥ ಯುವಕ ನನ್ನ ಹೆಸರು ಮಂಜು ಅಂತ ಹೇಳಿಕೊಳ್ಳುತ್ತಿದ್ದಾನೆ. ನಾನು ತುಂಬಾ ಚೆನ್ನಾಗಿ ಓದುತ್ತಿದ್ದೆ, ಆದರೆ ನನ್ನನ್ನ ಮೆಂಟಲ್ ಆಸ್ಪತ್ರೆಗೆ ಸೇರಿಸಿದ್ದರು ಎಂದು ಜೋರಾಗಿ ಕೂಗಿ ಹೇಳುತ್ತಿದ್ದಾನೆ.
ಬಿಲ್ಡಿಂಗ್ ಮೇಲಿಂದ ಯುವಕನನ್ನು ಇಳಿಸಲು ಪೊಲೀಸರು ಎಷ್ಟೇ ಪ್ರಯತ್ನಿಸಿದರೂ ಆತ ಕೇಳುತ್ತಿಲ್ಲ, ನಾನು ಈಗ ಇಲ್ಲಿಂದ ಹಾರಿ ಸಾಯ್ತಿನಿ ನನ್ನನ್ನ ಸಾಯಲು ಬಿಡಿ ಎನ್ನುತ್ತಿದ್ದಾನೆ. ಯುವಕನ ಹುಚ್ಚಾಟಕ್ಕೆ ಪೊಲೀಸರು ಸುಸ್ತಾಗಿದ್ದಾರೆ.
Poll (Public Option)

Post a comment
Log in to write reviews