
ಮೈಸೂರು: ಹುಲಿ ದಾಳಿಯಿಂದಾಗಿ ಮೇಕೆಗಾಹಿ ಮಹಿಳೆ ಸಾವನ್ನಪ್ಪಿರುವ ಘಟನೆ ಹೆಚ್ ಡಿ ಕೋಟೆಯಲ್ಲಿ ಭಾನುವಾರ ನಡೆದಿದೆ.
ತಾಲೂಕಿನ ಮೂರ್ಬಾಂದ್ ಬೆಟ್ಟದಲ್ಲಿ ಮಹಿಳೆ ಮೇಕೆ ಕಾಯಲು ಹೋಗಿದ್ದರು. ತುಂಬಾ ಸಮಯದ ನಂತರ ವಾಪಸ್ ಬಾರದ ಕಾರಣ ಮನೆಯವರು ಹುಡುಕಾಟ ನಡೆಸಿ ಠಾಣೆಗೆ ದೂರು ನೀಡಿದ್ದರು. ನಂತರ ಅರಣ್ಯ ಇಲಾಖೆ ಮಹಿಳೆಗಾಗಿ ಹುಡುಕಾಟ ನಡೆಸಿದ ವೇಳೆ, ಅರಣ್ಯ ವೀಕ್ಷಣೆಯ ಟವರ್ ಬಳಿ ಮಹಿಳೆ ಮೃತ ದೇಹಪತ್ತೆಯಾಗಿದ್ದು ಹುಲಿ ದಾಳಿ ಮಾಡಿರುವುದು ಖಚಿತವಾಗಿದೆ. ಮೃತ ಕುಟುಂಬಸ್ಥರಿಗೆ ಬಂಡಿಪುರದ ಸಿಎಫ್ಒ ಪ್ರಭಾಕರ್ ಸಹ 3ಲಕ್ಷ ಚೆಕ್ ನಿಡಿದ್ದಾರೆ. ಮತ್ತು ಸರ್ಕಾರದ ವತಿಯಿಂದ 15 ಲಕ್ಷ ಕೊಡಿಸಲು ಶಿಫಾರಸು ಮಾಡಿದ್ದಾರೆ. ಅಧಿಕಾರಿಗಳು ಮೃತ ಮಹಿಳೆಯ ಮಗನಿಗೆ ಅರಣ್ಯ ಇಲಾಖೆಯಲ್ಲಿ ಕೆಲಸ ಕೊಡುವ ಭರವಸೆ ನೀಡಿದ್ದಾರೆ.
Poll (Public Option)

Post a comment
Log in to write reviews