
ಮಾಸ್ಕೋ: ಉಗ್ರಗಾಮಿಗಳು ಚರ್ಚ್ ಮೇಲೆ ದಾಳಿ ನಡೆಸಿ 15 ಕ್ಕೂ ಹೆಚ್ಚು ಪೊಲೀಸರು ಮತ್ತು ಆರ್ಥೊಡಾಕ್ಸ್ ಪಾದ್ರಿ ಸೇರಿದಂತೆ ಹಲವಾರು ನಾಗರಿಕರನ್ನು ಕೊಂದಿದ್ದಾರೆ ಎಂದು ವರದಿಯಾಗಿದೆ.
ರಷ್ಯಾದ ಸೈನಾಗಾಂಜ್ ಮತ್ತು ಆರ್ಥ್ ಬಾಕ್ಸ್ ಚರ್ಚ್ ಗಳ ಮೇಲೆ ದಾಳಿ ನಡೆದಿದೆ. ರಷ್ಯಾ ಪೊಲೀಸರು ತನಿಖೆ ಆರಂಭಿಸಿದ್ದು, ಪತ್ತೆ ಕಾರ್ಯಾಚರಣೆ ನಡೆಸಿದ್ದಾರೆ ಎಂದು ಗವರ್ನರ್ ಸೆರ್ಗೆಯ್ ಮೆಲಿಕೋವ್ ಸೋಮವಾರ (ಜೂನ್ 24) ಮುಂಜಾನೆ ಹೇಳಿಕೆ ನೀಡಿದ್ದಾರೆ.
ಚರ್ಚ್‌ನಲ್ಲಿದ್ದ 66 ವರ್ಷದ ಫಾದರ್ ನಿಕೊಲಿ ಅವರ ಕತ್ತು ಸೀಳಿ ಕೊಲೆ ಮಾಡಲಾಗಿದೆ. ಗನ್ ಮ್ಯಾನ್ ಗಳು ಮತ್ತೊಂದು ಚರ್ಚ್ ಮೇಲೆ ದಾಳಿ ನಡೆಸಲು ತೆರಳುತ್ತಿದ್ದಾಗ ಅಡ್ಡಗಡ್ಡಿದ ಪೊಲೀಸರ ಮೇಲೆ ದಾಳಿ ನಡೆಸಿ ಹತ್ಯೆ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ರಷ್ಯಾದ ರಾಷ್ಟ್ರೀಯ ಭಯೋತ್ಪಾದನಾ ವಿರೋಧಿ ಸಮಿತಿಯು ಮುಸ್ಲಿಂ ಪ್ರದೇಶದಲ್ಲಿ ನಡೆದ ದಾಳಿಗಳನ್ನು ಭಯೋತ್ಪಾದಕ ಕೃತ್ಯಗಳು ಎಂದು ವಿವರಿಸಿದೆ. ಸೋಮವಾರ, ಮಂಗಳವಾರ ಮತ್ತು ಬುಧವಾರ ಈ ಪ್ರದೇಶದಲ್ಲಿ ಶೋಕಾಚರಣೆ ಘೋಷಿಸಲಾಗಿದೆ.
Poll (Public Option)

Post a comment
Log in to write reviews