
ಮನೆಯ ವಾಟರ್ ಬಿಲ್ ವಿಚಾರಕ್ಕೆ ಮನೆ ಓನರ್ ಹಾಗೂ ಬಾಡಿಗೆದಾರರ ನಡುವೆ ಗಲಾಟೆ ನಡೆದಿರುವ ಘಟನೆ ನಗರದ ಬೇಗೂರು ರಸ್ತೆಯ ಪಾಟೇಲ್ ಲೇಔಟ್ ನಲ್ಲಿ ನಿನ್ನೆ ರಾತ್ರಿ ಘಟನೆ ನಡೆದಿದೆ. ಕಳೆದ 9 ತಿಂಗಳನಿಂದ ಪತ್ನಿ ಜೊತೆ ವಿಘ್ನೇಶ್ ಪಾಟೇಲ್ ಲೇಔಟ್ ನ ಬಾಡಿಗೆ ಮನೆಯಲ್ಲಿ ವಾಸವಾಗಿದ್ದಾರೆ.
ಈ ಮಧ್ಯೆ ನೀರಿನ ಬಿಲ್ ಹೆಚ್ಚು ಬರ್ತಿದೆ ನಮಗೆ ಎಂದು ಪ್ರತ್ಯೇಕ ವಾಟರ್ ಮೀಟರ್ ಹಾಕಿಸಿ ಎಂದು ಬಾಡಿಗೆದಾರ ವಿಘ್ನೇಶ್ ಕೇಳಿಕೊಂಡಿದ್ದರು. ಆದ್ರೆ, ಓನರ್ ಏಕಾಏಕಿ ಬಂದು ತಕ್ಷಣ ಮನೆ ಖಾಲಿ ಮಾಡಿ ಎಂದು ಒತ್ತಡ ಹೇರಿದ್ದಾರೆ ಎಂದು ಆರೋಪ ಮಾಡಲಾಗಿದೆ. ಬಾಡಿಗೆದಾರ ಲೀಗಲ್ ನೋಟಿಸ್ ಸಹ ನೀಡಿದ್ದರು.
ಆದರೆ ಲೀಗಲ್ ನೋಟಿಸ್ ಕಳುಹಿಸಿದ್ದಕ್ಕೆ ಮನೆ ಮಾಲೀಕರು ಹಾಗೂ ಅವರ ಕಡೆಯವರಿಂದ ಹಲ್ಲೆ ಆರೋಪ ಈಗ ಕೇಳಿಬಂದಿದೆ. ಹಲ್ಲೆ ವಿಡಿಯೋ ಬಾಡಿಗೆದಾರನ ಪತ್ನಿಯ ಮೊಬೈಲ್‌ನಲ್ಲಿ ರೆಕಾರ್ಡ್ ಮಾಡಲಾಗಿದೆ. ಇನ್ನೂ ಘಟನೆ ವಿಡಿಯೋವನ್ನ ಎಕ್ಸ್ ನಲ್ಲಿ ಶೇರ್ ಮಾಡಿ ಪೊಲೀಸರಿಗೆ ಟ್ಯಾಗ್ ಮಾಡಲಾಗಿದೆ.
Poll (Public Option)

Post a comment
Log in to write reviews