
ಹಾಸನ: ದರ್ಶನ್ ಮಾಡಿರುವುದು ಹೀನ ಕೃತ್ಯ ಎಂದು ಮಾಜಿ ಶಾಸಕ ಎ.ಟಿ.ರಾಮುಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದರ್ಶನ ಪಟಾಲಂನ ಕೃತ್ಯ ನೋಡಿ ದಿಗ್ಬ್ರಮೆ ಆಗಿದೆ. ಇಂಥವರಿಂದ ಸಮಾಜದ ಸ್ವಾಸ್ಥ್ಯ ಹಾಳು. ಹಣದ ಬಲ ಹಾಗೂ ಮದದಿಂದ ಈ ಕೃತ್ಯ ಎಸಗಿದ್ದಾನೆ. ಉರಿದಿದ್ದು ಬೂದಿಯಾಗುತ್ತದೆ ಎಂಬ ಗಾದೆ ಮಾತಿಗೆ ದರ್ಶನ ದೊಡ್ಡ ಉದಾಹರಣೆ ಎಂದರು.
ಅಭಿಮಾನಿಗಳ ಪ್ರಖ್ಯಾತಿ ಬದಲು ಈ ಕುಖ್ಯಾತಿ ನಾಡಿನ ಸಂಸ್ಕೃತಿಗೆ ದೊಡ್ಡ ಪೆಟ್ಟು. ಇದಕ್ಕೆ ಬರೀ ವಿರೋಧಿಸದರಷ್ಟೇ ಸಾಲದು. ಇಡೀ ಗ್ಯಾಂಗ್‌ನ ವಿರುದ್ಧ ಕಟ್ಟುನಿಟ್ಟಿನ ಕ್ರಮ ಆಗಬೇಕು, ಲಕ್ಷಾಂತರ ಅಭಿಮಾನಿ ಹೊಂದಿರುವವರು ಕುಖ್ಯಾತಿ ಮೆರೆದರೆ ಕುಟುಂಬದವರ ಕತೆ ಏನು ಎಂದು ಪ್ರಶ್ನಿಸಿದರು.
ಅಭಿಮಾನಿಗಳು ಅನುಕರಣೆ ಮಾಡುತ್ತಾರೆ ಎಂದು ಡಾ.ರಾಜ್ ಕುಮಾರ್ ಸಿಗರೇಟ್ ಸೇದುತ್ತಿರಲಿಲ್ಲ. ಸಮಾಜದಲ್ಲಿ ಚಿತ್ರನಟರನ್ನ ಅನುಕರಣೆ ಮಾಡುವವರ ಸಂಖ್ಯೆ ಹೆಚ್ಚಾಗಿಯೇ ಇದೆ. ಈ ರೀತಿ ಕೃತ್ಯ ಮಾಡುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದರು.
Poll (Public Option)

Post a comment
Log in to write reviews