2024-12-24 06:52:23

News broadcasting is the medium of broadcasting various news events and other information via television, radio, or the internet in the field of broadcast journalism.

Get In Touch

  • info@samayanews.tv
  • 8050000444
  • Samaya News, 48, 2nd Floor, 2nd Main, 2nd Cross, Ganganagar, Muthappa Block, RT Nagar, Bengaluru, Karnataka 560032

ಟೀಂ ಇಂಡಿಯಾಗೆ ಅಶ್ವಿನ್ - ಜಡೇಜಾ ರಕ್ಷಣೆ

ಚೆನ್ನೈ: ಭಾರತ ಮತ್ತು ಬಾಂಗ್ಲಾದೇಶ ನಡುವೆ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾದಪ್ರಮುಖಬ್ಯಾಟರ್‌ಗಳೆಲ್ಲವಿಫಲರಾದಾಗಟೀಂ ಇಂಡಿಯಾದಬೌಲಿಂಗ್‌ ವಿಭಾಗದಪ್ರಮುಖಅಸ್ತ್ರವೆನಿಸಿರುವಆರ್.ಅಶ್ವಿನ್ (102*)​ ಆಕರ್ಷಕ ಶತಕ ಸಿಡಿಸಿದರೆ,ಮತ್ತೊಂದೆಡೆ, ಜಡೇಜಾ (86*)ರನ್‌ಗಳ ಅರ್ಧಶತಕ ಪೂರೈಸಿತಂಡಕ್ಕೆನೆರವಾದವರು. 108 ಎಸೆತಗಳನ್ನು ಎದುರಿಸಿದ ಆರ್‌.ಅಶ್ವಿನ್‌ಅವರು 10 ಬೌಂಡರಿ ಹಾಗೂ 2 ಸಿಕ್ಸರ್‌ ನೆರವಿನಿಂದ ತಮ್ಮ ಟೆಸ್ಟ್ ವೃತ್ತಿಜೀವನದಲ್ಲಿ 6ನೇ ಶತಕ ಪೂರೈಸಿದರು. ಇದರೊಂದಿಗೆ ಮೊದಲ ದಿನದಾಟದ ಅಂತ್ಯಕ್ಕೆ ಭಾರತ 6 ವಿಕೆಟ್​ ನಷ್ಟಕ್ಕೆ 339 ರನ್​ ಕಲೆಹಾಕಿದೆ. ಅಶ್ವಿನ್ ಮತ್ತುಜಡೇಜಾ ಎರಡನೇ ದಿನದಾಟಕ್ಕೆ ಕ್ರೀಸ್​ ಕಾಯ್ದುಕೊಂಡಿದ್ದಾರೆ.

ಇದಕ್ಕೂ ಮುನ್ನ ಟಾಸ್​ ಸೋತು ಮೊದಲು ಬ್ಯಾಟ್​ ಮಾಡಿದ್ದ ಭಾರತ ಕಳಪೆ ಆರಂಭ ಪಡೆದುಕೊಂಡಿತು. ಕೇವಲ 144ರನ್​ಗಳಿಗೆ 6 ವಿಕೆಟ್​ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಜೈಸ್ವಾಲ್​ ಹೊರತುಪಡಿಸಿ ನಾಲ್ಕುಪ್ರಮುಖ ಬ್ಯಾಟರ್​ಗಳು ಅರ್ಧಶತಕ ಪೂರೈಸಲು ಸಾಧ್ಯವಾಗದೇ ಪೆವಿಲಿಯನ್​ ಸೇರಿದರು. ಈ ವೇಳೆ ತಂಡಕ್ಕೆ ಜಡೇಜಾ ಮತ್ತು ಅಶ್ವಿನ್​ ನೆರವಾದರು. ಈ ಇಬ್ಬರು ತಮ್ಮ ಆಕರ್ಷಕ ಬ್ಯಾಟಿಂಗ್​ ನೆರವಿನಿಂದ ತಂಡದ ಸ್ಕೋರ್‌ ಅನ್ನು300ರ ಗಡಿಗೆ ಕೊಂಡೊಯ್ದರು.

195 ರನ್​ಗಳ ಜೊತೆಯಾಟ: ಈ ಇಬ್ಬರು ಆಟಗಾರರು 7ನೇ ವಿಕೆಟ್‌ಗೆ 195 ರನ್‌ಗಳ ಅಜೇಯ ಜೊತೆಯಾಟ ಆಡಿ ಭಾರತವನ್ನು ಬೃಹತ್ ಮೊತ್ತದತ್ತ ಕೊಂಡೊಯ್ದರು. ರೋಹಿತ್, ಗಿಲ್ ಮತ್ತು ವಿರಾಟ್ ಅವರಂತಹ ಸ್ಟಾರ್‌ಗಳು ಈ ಪಿಚ್‌ನಲ್ಲಿ ರನ್ ಮಾಡಲು ಹೆಣಗಾಡುತ್ತಿದ್ದರೆ, ಈ ಆಲ್‌ರೌಂಡರ್‌ಗಳು ಬೃಹತ್ ಸ್ಕೋರ್‌ಗಳೊಂದಿಗೆ ಬಾಂಗ್ಲಾ ಬೌಲರ್‌ಗಳನ್ನುಬೆಂಡೆತ್ತಿದರು.

Post a comment

No Reviews