2024-09-19 09:17:43

News broadcasting is the medium of broadcasting various news events and other information via television, radio, or the internet in the field of broadcast journalism.

Get In Touch

  • info@samayanews.tv
  • 8050000444
  • Samaya News, 48, 2nd Floor, 2nd Main, 2nd Cross, Ganganagar, Muthappa Block, RT Nagar, Bengaluru, Karnataka 560032

ದಸರಾದಲ್ಲಿ ಪಾಲ್ಗೊಂಡಿದ್ದ ಅಶ್ವತ್ಥಾಮ ಆನೆ ಸಾವು

ಮೈಸೂರು: ದಸರಾ ಮಹೋತ್ಸವದಲ್ಲಿ ಪಾಲ್ಗೊಂಡಿದ್ದ ಅಶ್ವತ್ಥಾಮ ಆನೆ ಸೋಲಾರ್ ಬೇಲಿಯ ಮೇಲೆ ವಿದ್ಯುತ್  ಪ್ರವಹಿಸಿ ಮೃತಪಟ್ಟಿದೆ. ಹುಣಸೂರು- ಪಿರಿಯಾಪಟ್ಟಣ ತಾಲೂಕಿನ ಗಡಿ ಭಾಗದ ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶ ವ್ಯಾಪ್ತಿಯ ಭೀಮನಕಟ್ಟೆ ಆನೆ ಶಿಬಿರದ ಬಳಿ ಅಶ್ವತ್ಥಾಮ ಮೇವು ಅರಸಿ ಕಾಡಿಗೆ ತೆರಳಿದ್ದ ವೇಳೆ ಈ ಘಟನೆ ನಡೆದಿದೆ. ಸೋಲಾರ್ ಬೇಲಿ ಮೇಲೆ ವಿದ್ಯುತ್ ತಂತಿಯು ಬಿದ್ದಿದ್ದರಿಂದ ವಿದ್ಯುತ್ ಆಘಾತದಿಂದ ಅಶ್ವತ್ಥಾಮ ಮೃತಪಟ್ಟಿದೆ ಎಂದು ಮೂಲಗಳು ತಿಳಿಸಿದ್ರೆ, ಇಲಾಖೆ ಮೂಲಗಳು ಅನಾರೋಗ್ಯದಿಂದ ಮೃತಪಟ್ಟಿದೆ ಎಂದು ಹೇಳಿವೆ.

2017ರಲ್ಲಿ ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನಲ್ಲಿ ಅಶ್ವತ್ಥಾಮನನ್ನು ಸೆರೆ ಹಿಡಿಯಲಾಗಿತ್ತು. ಶಾಂತ ಹಾಗೂ ಗಾಂಭೀರ್ಯ ಸ್ವಭಾವಕ್ಕೆ ಹೆಸರಾಗಿದ್ದ ಅದನ್ನು ನಾಲ್ಕು ವರ್ಷದಲ್ಲಿಯೇ 2021ರ ದಸರೆಗೆ ಕರೆತರಲಾಗಿತ್ತು. ಅದಕ್ಕೆ ನಡಿಗೆ ತಾಲೀಮು ಸೇರಿದಂತೆ ವಿವಿಧ ತಾಲೀಮನ್ನು ನೀಡಲಾಗಿತ್ತು.‌

ಎರಡು ಬಾರಿ ದಸರಾ ಮಹೋತ್ಸವದಲ್ಲಿ ಪಾಲ್ಗೊಂಡಿದ್ದ 38 ವರ್ಷದ ‘ಅಶ್ವತ್ಥಾಮ’ 2022ರ ದಸರೆಯಲ್ಲಿ ಪಾಲ್ಗೊಂಡು ಗಮನ ಸೆಳೆದಿತ್ತು.
 

Post a comment

No Reviews