
ಬೆಂಗಳೂರು: ಅಸ್ಸಾಂ ಮೂಲದ ಶಂಕಿತ ಉಗ್ರನನ್ನು ಎನ್ಐಎ ಅಧಿಕಾರಿಗಳು ಗ್ರಾಮಾಂತರ ಜಿಲ್ಲೆಯ ಜಿಗಣಿಯಲ್ಲಿ ಬಂಧಿಸಲಾಗಿದೆ. ಗಿರೀಶ್ ಬೋರಾ ಅಲಿಯಾಸ್ ಗೌತಮ್ ಎಂಬ ಶಂಕಿತ ಉಗ್ರನನ್ನು ರಾಷ್ಟ್ರೀಯ ತನಿಖಾದಳ ಬಂಧಿಸಿದೆ.
ಉಗ್ರ ಉಲ್ಫಾ ಸಂಘಟನೆಗೆ ಸೇರಿದವನು ಎಂಬುದು ಆರಂಭಿಕ ಮಾಹಿತಿಯಲ್ಲಿ ತಿಳಿದು ಬಂದಿದೆ. ಗುವಹಾತಿಯಲ್ಲಿ ಐಇಡಿ ಬಾಂಬ್ ಇಟ್ಟು ಬೆಂಗಳೂರಿಗೆ ಫ್ಯಾಮಿಲಿ ಸಮೇತ ಬಂದಿದ್ದ ಈ ಉಗ್ರ ಖಾಸಗಿ ಕಂಪನಿಯೊಂದರಲ್ಲಿ ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದು,ಗೌತಮ್ ಎನ್ನುವ ಹೆಸರಿನಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದ ಎಂದು ತಿಳಿದು ಬಂದಿದೆ. ಈ ಬಗ್ಗೆ ಪಕ್ಕಾ ಮಾಹಿತಿಯನ್ನು ಪಡೆದ ಎನ್ಐಎ ತಂಡ ಈತನನ್ನು ಬಲೆಗೆ ಕೆಡವಿದೆ.
ಗುವಹಾತಿಯಲ್ಲಿ ಒಟ್ಟು ಐದು IED ಬಾಂಬ್ಗಳನ್ನು ಇಟ್ಟಿದ್ದ ಈತ ಬೆಂಗಳೂರಿನ ಜಿಗಣಿಗೆ ಬಂದು ವಾಸವಾಗಿದ್ದ.
ಇಲ್ಲಿಯೂ ಕೂಡ ಒಂದಷ್ಟು ವಿಧ್ವಂಸಕಾರಿ ಕೃತ್ಯಕ್ಕೆ ಯೋಜನೆ ನಡೆಸಿದ್ದ ಎಂಬ ಮಾಹಿತಿಗಳು ಕೂಡ ತಿಳಿದು ಬಂದಿವೆ. ಬಂಧಿತನಿಂದ ಮೊಬೈಲ್ ಮತ್ತು ಒಂದಷ್ಟು ದಾಖಲೆಗಳನ್ನ ವಶಕ್ಕೆ ಪಡೆದಿರುವ ಎನ್ಐಎ ಇಲ್ಲಿನ ನ್ಯಾಯಾಲಯಕ್ಕೆ ಹಾಜರುಪಡಿಸಿ ಅಸ್ಸಾಂಗೆ ಕರೆದೊಯ್ದಿದೆ.
Poll (Public Option)

Post a comment
Log in to write reviews