
ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕು ಗಗನಚುಕ್ಕಿ ಜಲಪಾತದಲ್ಲಿ ಆರ್ಮಿ ಪೊಲೀಸ್ ಪೇದೆಯೊಬ್ಬರು ಕಾಲು ಜಾರಿ ಬಿದ್ದು ಮೃತಪಟ್ಟಿದ್ದಾರೆ. ಗುಜರಾತ್ ಮೂಲದ 26 ವರ್ಷದ ಚೌಧರಿ ಕೌಶಿಕ್ ಮೃತಪಟ್ಟ ದುರ್ದೈವಿ. ಬೆಂಗಳೂರಿನ ನೀಲಸಂದ್ರದಲ್ಲಿರುವ ಲ್ಯಾಂಡ್ ಮಿಲಿಟರಿ ತರಬೇತಿ ಕೇಂದ್ರದಲ್ಲಿ ಮಿಲಿಟರಿ ಪೊಲೀಸ್ ಪೇದೆಯಾಗಿದ್ದ ಚೌಧರಿ ಕೌಶಿಕ್ ತನ್ನ ಏಳು ಮಂದಿ ಸ್ನೇಹಿತರೊಂದಿಗೆ ಗಗನಚುಕ್ಕಿ ಜಲಪಾತ ವೀಕ್ಷಣೆಗಾಗಿ ಬಂದಿದ್ದರು. ಈ ಸಂದರ್ಭದಲ್ಲಿ ಕೆಳಗಡೆ ಇಳಿಯುತ್ತಿದ್ದಾಗ ಕಾಲು ಜಾರಿ ಬಿದ್ದು ನೀರಿನಲ್ಲಿ ಮುಳುಗಿ ಮೃತಪಟ್ಟಿರುತ್ತಾರೆ ಎಂದು ಪೊಲೀಸರು ತಿಳಿಸಿದ್ದಾರೆ.
Poll (Public Option)

Post a comment
Log in to write reviews