
ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಆರೋಪಿ ಒಬ್ಬನನ್ನು ರಕ್ಷಿಸಲು ಪೊಲೀಸರಿಗೆ ಕೋಟಿ ಕೋಟಿ ಹಣದ ಆಮಿಷ ಒಡ್ಡಿರುವುದಲ್ಲದೆ, ಶವವನ್ನು ನಿಗದಿತ ಸ್ಥಳದಲ್ಲೇ ಹಾಕಬೇಕೆಂದು ಪೊಲೀಸರೇ ಸೂಚನೆ ಕೊಟ್ಟರಾ ಎಂಬ ಅನುಮಾನ ಕಾಡುತ್ತಿದೆ. ಇದಕ್ಕೆ ಪೂರಕವಾಗಿ ಇಡೀ ಸ್ಟೇಷನ್ ಗೆ ಶಾಮಿಯಾನ ಹಾಕಿರುವುದು ಮತ್ತಷ್ಟು ಪುಷ್ಟಿ ನೀಡಿದೆ.
ಕೊಲೆ ಆರೋಪಿಗಳಿಗೆ ರಾಜಾತಿಥ್ಯ ನೀಡಲು ಶಾಮಿಯಾನ ಹಾಕಲಾಗಿದೆ ಎಂಬ ಆರೋಪ ಸಾರ್ವಜನಿಕರಿಂದ ಕೇಳಿ ಬಂದಿದೆ. ಆದರೆ ಅಭಿಮಾನಿಗಳ ಕಾಟ ಹೆಚ್ಚಾಗಿ ಕಾನೂನು ಪ್ರಕ್ರಿಯೆಗಳಿಗೆ ತೊಡಕಾಗಬಾರದು ಎಂದು ಈ ಕ್ರಮ ಕೈಗೊಳ್ಳಲಾಗಿದೆ ಎಂದು ಪೊಲೀಸ್ ಅಧಿಕಾರಗಳ ವಾದವಾಗಿದೆ.
ಠಾಣೆಯ ಇಡೀ ಕಟ್ಟಡಕ್ಕೆ ಸುತ್ತಲೂ ಶಾಮಿಯಾನ ಹಾಕಿಸಿರುವ ಸಿಬ್ಬಂದಿ, ಒಳಗಡೆ ಏನು ನಡೆಯುತ್ತಿದೆ ಎಂಬುದನ್ನು ಹೊರಗಿನವರಿಗೆ ತಿಳಿಯದಂತೆ ಮಾಡಿದ್ದಾರೆ. ಠಾಣೆಯ ಕಾಪೌಂಡ್ ಅಷ್ಟೇ ಅಲ್ಲದೆ, ಇಡೀ ಕಟ್ಟಡಕ್ಕೆ ಶಾಮಿಯಾನ ಹಾಕಲಾಗಿದೆ. ಕಟ್ಟಡದ ಎರಡನೇ ಫ್ಲೋರ್ನಲ್ಲೂ ಶಾಮಿಯಾನ ಹಾಕಿ ಕವರ್ ಮಾಡಲಾಗಿದೆ.
Poll (Public Option)

Post a comment
Log in to write reviews