
ವಿದ್ಯಾರ್ಥಿಗಳಿಗೆ ಬಸ್ ಪಾಸ್ ವಿತರಿಸಲು ಕೆಎಸ್ಆರ್ಟಿಸಿ ಅರ್ಜಿ ಆಹ್ವಾನಿಸಿದೆ.
ವಿದ್ಯಾರ್ಥಿಗಳು ಸೇವಾ ಪೋರ್ಟಲ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದ್ದು, ಇದಕ್ಕೆ ಯಾವುದೆ ಶುಲ್ಕವಿಲ್ಲ. ಬಸ್‌ಪಾಸ್ ಪಡೆಯಲು ಇಚ್ಚಿಸುವವರು ಹತ್ತಿರ ಇರುವ ಗ್ರಾಮ ಒನ್ , ಬೆಂಗಳೂರು ಒನ್‌ನಲ್ಲಿ ಹೋಗಿ ಅರ್ಜಿ ಅಲ್ಲಿಸಬಹುದಾಗಿದೆ.
ಪಾಸ್ ವಿತರಿಸಲು ನಿಗಮ ಒಟ್ಟು 129 ಕೌಂಟರ್ ತೆರೆದಿದ್ದು, ವಿದ್ಯಾರ್ಥಿಗಳ ಅರ್ಜಿ ನಮೂನೆಯಲ್ಲಿ ಕೌಂಟರ್ ಹೆಸರು, ವಿಳಾಸ ನಮೂದಿಸಲಾಗಿರುತ್ತದೆ. ಅಲ್ಲಿ ವಿದ್ಯಾರ್ಥಿಗಳು ಬಸ್ ಪಾಸ್ ಪಡೆಯಬಹುದು ಎಂದು ಕೆಎಸ್ಆರ್ಟಿಸಿ ತಿಳಿಸಿದೆ.
Poll (Public Option)

Post a comment
Log in to write reviews