
ಬೆಂಗಳೂರು : ಆ್ಯಂಕರ್ ಅನುಶ್ರೀ ಅವರು ಕಿರುತೆರೆ ಲೋಕದಲ್ಲಿ, ಆ್ಯಂಕರಿಂಗ್ ಲೋಕದಲ್ಲಿ ಸಾಕಷ್ಟು ಹೆಸರು ಮಾಡಿದ್ದಾರೆ. ಅವರು ಕೆಲವು ಸಿನಿಮಾ ಕೂಡ ಮಾಡಿದ್ದಾರೆ. ಅವರ ಖ್ಯಾತಿ ಸಾಕಷ್ಟು ಹೆಚ್ಚಿದೆ. ಹೀಗಿರುವಾಗಲೇ ಅವರ ಮದುವೆ ಯಾವಾಗ ಎನ್ನುವ ಪ್ರಶ್ನೆ ಆಗಾಗ ಕೇಳಿ ಬರುತ್ತಲೇ ಇರುತ್ತದೆ. ಅವರ ಮದುವೆ ಫಿಕ್ಸ್ ಆಗಿದೆ ಎಂದು ಕೆಲವು ಯೂಟ್ಯೂಬರ್ಗಳು ಆಗಾಗ ವಿಡಿಯೋ ಮಾಡಿದ್ದೂ ಇದೆ. ಜೀ ಕನ್ನಡದ ‘ಕುಟುಂಬ ಅವಾರ್ಡ್ಸ್’ ಕಾರ್ಯಕ್ರಮದಲ್ಲಿ ಈ ಬಗ್ಗೆ ಚರ್ಚೆ ನಡೆದಿದೆ.
ಜೀ ಕನ್ನಡ ಕುಟುಂಬ ಅವಾರ್ಡ್ಸ್ ಕಾರ್ಯಕ್ರಮದಲ್ಲಿ ಆ್ಯಂಕರ್ ಅಕುಲ್ ಅವರು ಅನುಶ್ರೀ ಬಾಯ್ಫ್ರೆಂಡ್ನ ಸ್ಟೇಜ್ ಮೇಲೆ ಕರೆಸುತ್ತಿದ್ದೇವೆ ಎಂದರು. ಮ್ಯೂಸಿಕ್ ಕೂಡ ಬಂತು. ಆದರೆ, ಯಾರೂ ಬರಲೇ ಇಲ್ಲ. ‘ಈ ರೀತಿ ಮಾಡಬೇಕು ಎಂದುಕೊಂಡಿದ್ದೆವು. ಆ ವ್ಯಕ್ತಿಗೆ ಬರಬೇಡ ಎಂದು ಅನು ಹೇಳಿದರು. ನಿಮ್ಮ ಖಾಸಗಿತನಕ್ಕೆ ಒತ್ತುಕೊಟ್ಟು ಅವರನ್ನು ಕರೆಸಿಲ್ಲ’ ಎಂದರು ಅಕುಲ್.
ಅನುಶ್ರೀ ಮದುವೆ ವಿವಾರವಾಗಿ ಆಗಾಗ ಸೋಶಿಯಲ್ ಮೀಡಿಯಾದಲ್ಲಿ ಸುದ್ದಿಗಳು ಹರಿದಾಡಿದ್ದು ಇದೆ. ಈ ಬಗ್ಗೆ ಅವರು ಮಾತನಾಡಿದ್ದಾರೆ. ‘ನನ್ನ ಮದುವೆ ಚಿಂತೆ ನನ್ನ ಮನೆಯವರಿಗಿಂತ ಯೂಟ್ಯೂಬರ್ಗಳಿಗೆ ಇದೆ. ಪ್ರತಿ ವಾರ ಯಾರು ಸಿಂಗಲ್ ಇದ್ದಾರೆ ಅವರ ಜೊತೆ ನನ್ನ ಮದುವೆ ಮಾಡಿಸಿದ್ದಾರೆ’ ಎಂದರು ಅನುಶ್ರೀ.
‘ಎಲ್ಲ ಹುಡಿಗಿಯರಂತೆ ನನಗೂ ಮದುವೆ ಆಗಬೇಕು ಎಂದಿದೆ. ನನಗೂ ಬಾಳ ಸಂಗಾತಿ ಬೇಕು ಎಂದಿದೆ. ಎಲ್ಲದಕ್ಕೂ ಸಮಯ ಬರಬೇಕು. ಸರಿಯಾದ ಟೈಮ್ ಅಲ್ಲಿ ಸರಿಯಾದ ವ್ಯಕ್ತಿ ಬರಬೇಕು. ನಾನು ಮದುವೆ ಆಗಬೇಕು ಎಂದು ಮನಸ್ಸು ಮಾಡಬೇಕಿತ್ತು. ಈವರೆಗೆ ಮಾಡಿರಲಿಲ್ಲ. ಈಗ ಮಾಡಿದ್ದೇನೆ. ಮುಂದಿನ ವರ್ಷ ಒಳ್ಳೆಯ ಹುಡುಗ ಸಿಕ್ಕರೆ ಮದುವೆ ಆಗುತ್ತೇನೆ. ಆ ವ್ಯಕ್ತಿ ಬರಲಿ ಎಂದು ಕಾಯುತ್ತೇನೆ. ಬಂದರೆ ನಾನು ಅವರನ್ನು ನಿಮ್ಮ ಮುಂದೆ ತಂದು ನಿಲ್ಲಿಸುತ್ತೇನೆ’ ಎಂದರು
Poll (Public Option)

Post a comment
Log in to write reviews