
ಬೆಂಗಳೂರು (ಆ.14): ಬೆಂಗಳೂರಿನಲ್ಲಿ ಮತ್ತೊಮ್ಮೆ ಅನುಮಾನಾಸ್ಪದ ಸ್ಫೋಟವಾಗಿದೆ. ಮೊದಲಿಗೆ ಇದು ಸಿಲಿಂಡರ್ ಸ್ಪೋಟಕ ಎನ್ನಲಾಗಿತ್ತಾದರೂ, ಎನ್‌ಐಎ ಟೀಮ್ ಸ್ಪೋಟದ ಸ್ಥಳಕ್ಕೆ ಭೇಟಿ ನೀಡಿ ತನಿಖೆ ಆರಂಭಿಸಿದೆ.
ರಾಜಧಾನಿ ಬೆಂಗಳೂರಿನಲ್ಲಿ ಮತ್ತೊಂದು ಅನುಮಾನಾಸ್ಪದ ಸ್ಪೋಟ ವರದಿಯಾಗಿದೆ. ನಗರದ ಜೆಪಿ ನಗರ 24. ಮೇನ್ ಉಡುಪಿ ಉಪಹಾರದ ಮನೆಯ ಬಳಿ ಘಟನೆ ನಡೆದಿದೆ. ಈ ಸ್ಪೋಟವೂ ನಿಗೂಢವಾಗಿದೆ ಎನ್ನಲಾಗಿದೆ. ಈ ಹಿಂದೆ ನಡೆದ ರಾಮೇಶ್ವರಂ ಕೆಫೆಗೂ ಮೊದಲು ಸಿಲಿಂಡರ್ ಸ್ಫೋಟ ಎನ್ನಲಾಗಿತ್ತಾದರೂ, ಬಳಿಕ ಅದು ಭಯೋತ್ಪಾದಕ ಕೃತ್ಯ ಎನ್ನುವುದು ಖಚಿತವಾಗಿತ್ತು. ಅದೇ ಮಾದರಿಯಲ್ಲಿ ಜೆಪಿ ನಗರದಲ್ಲಿ ನಡೆದಿರುವ ಸ್ಪೋಟವೂ ಕೂಡ ಅನುಮಾನಾಸ್ಪದಕ್ಕೆ ಕಾರಣವಾಗಿದ್ದು, ಇದು ಕುಕ್ಕರ್ ಸ್ಫೋಟ ಎನ್ನಲಾಗುತ್ತಿದೆ. ಜೆಪಿ ನಗರದ ಮನೆಯಲ್ಲಿ ಈ ಘಟನೆ ನಡೆದಿದ್ದು,ಪ್ರಕರಣದಲ್ಲಿ ಇಬ್ಬರಿಗೆ ಗಾಯವಾಗಿದೆ. ಸಮೀರ್ ಅಂಡ್ ಮೋಸಿನ್ ಇಬ್ಬರಿಗೆ ಗಾಯವಾಗಿದೆ. ಸೋಮವಾರ ಬೆಳಿಗ್ಗೆ 10 ಗಂಟೆಗೆ ಈ ಸ್ಪೋಟ ಸಂಭವಿಸಿದೆ. ಇಬ್ಬರೂ ಯುವಕರು ಉತ್ತರ ಪ್ರದೇಶದ ಮೂಲದವರು ಎನ್ನಲಾಗಿದೆ. ಸ್ಪೋಟದ ತೀವ್ರತೆಗೆ ವಸ್ತುಗಳೆಲ್ಲಾ ಚೆಲ್ಲಾಪಿಲ್ಲಿಯಾಗಿದೆ. ಕುಕ್ಕರ್ ನಿಂದ ಸ್ಪೋಟ ಸಂಭವಿಸಿರುವ ಶಂಕೆ ವ್ಯಕ್ತವಾಗಿದೆ. ಹೊಟೇಲ್‌ನಲ್ಲಿ ಸುಟ್ಟ ವಯರ್‌ಗಳು ಕೂಡ ಪತ್ತೆಯಾಗಿದೆ.
Poll (Public Option)

Post a comment
Log in to write reviews