2024-12-24 06:03:23

News broadcasting is the medium of broadcasting various news events and other information via television, radio, or the internet in the field of broadcast journalism.

Get In Touch

  • info@samayanews.tv
  • 8050000444
  • Samaya News, 48, 2nd Floor, 2nd Main, 2nd Cross, Ganganagar, Muthappa Block, RT Nagar, Bengaluru, Karnataka 560032

ವಯನಾಡ್‌ನ ಭೀಕರ ಭೂಕುಸಿತದಿಂದ ತನ್ನ ಕುಟುಂಬದ 9 ಸದಸ್ಯರನ್ನು ಕಳೆದುಕೊಂಡ ಯುವತಿಗೆ ಮತ್ತೊಂದು ಆಘಾತ

ವಯನಾಡ್​: ವಯನಾಡ್‌ನಲ್ಲಿ ಇತ್ತೀಚೆಗೆ ಸಂಭವಿಸಿದ ಭೀಕರ ಭೂಕುಸಿತದಿಂದ ತನ್ನ ಕುಟುಂಬದ 9 ಸದಸ್ಯರನ್ನು ಕಳೆದುಕೊಂಡಿದ್ದ ಯುವತಿಗೆ ಇದೀಗ ಮತ್ತೊಂದು ಆಘಾತವಾಗಿದೆ. ಭೀಕರ ಪ್ರವಾಹದಲ್ಲಿ ಬದುಕುಳಿದ ಶೃತಿ ಎಂಬವರು ರಸ್ತೆ ಅಪಘಾತದಲ್ಲಿ ತನ್ನ ಭಾವಿ ಗಂಡನನ್ನೂ ಕಳೆದುಕೊಂಡಿದ್ದಾರೆ. ಅಪಘಾತದಲ್ಲಿ ಶೃತಿ ಕಾಲಿಗೂ ಗಾಯವಾಗಿದೆ. ಜೊತೆಗಿದ್ದ ಸಹೋದರ ಸಂಬಂಧಿ ಸಣ್ಣಪುಟ್ಟ ಗಾಯಗಳಿಂದ ಅಪಾಯದಿಂದ ಪಾರಾಗಿದ್ದಾರೆ.

ಈ ಕುರಿತು ಮಾಹಿತಿ ನೀಡಿದ ಕೇರಳ ಪೊಲೀಸರು, ಕೋಝಿಕ್ಕೋರ್​-ಕೊಳ್ಳಗಲ್​ ರಾಷ್ಟ್ರೀಯ ಹೆದ್ದಾರಿ ವೆಲ್ಲರಂಕುನ್ನು ಎಂಬಲ್ಲಿ ಖಾಸಗಿ ಬಸ್​ ಮತ್ತು ವ್ಯಾನ್​ ನಡುವೆ ಅಪಘಾತ ಸಂಭವಿಸಿದ್ದು, ಈ ಘಟನೆಯಲ್ಲಿ ಜೆನ್ಸನ್​ ಮೃತಪಟ್ಟಿದ್ದಾರೆ. ಕಾಲಿನ ಗಾಯಕ್ಕೆ ತುತ್ತಾಗಿರುವ ಯುವತಿ ಕಳೆದೆರಡು ತಿಂಗಳ ಹಿಂದೆ ಮುಂಡಕೈ-ಚೂರಲ್ಮಲಾದ ಭೂಕುಸಿತದಲ್ಲಿ ತನ್ನ ಪೋಷಕರು, ಸಹೋದರಿಯರು ಸೇರಿದಂತೆ ಒಟ್ಟು 9 ಜನರನ್ನು ಕಳೆದುಕೊಂಡಿದ್ದರು. ಭಾವಿ ಪತಿಯೊಂದಿಗೆ ಕಾರಿನಲ್ಲಿ ಹೋಗುತ್ತಿದ್ದಾಗ ಇದೀಗ ಮತ್ತೊಂದು ದುರಂತ ಸಂಭವಿಸಿ ಅವರನ್ನೂ ಕಳೆದುಕೊಂಡಿದ್ದಾರೆ ಎಂದು ತಿಳಿಸಿದ್ದಾರೆ.

ಜೆನ್ಸನ್​ ಮತ್ತವರ ಸ್ನೇಹಿತರು ಲಿಖಿಟಿ ಕಡೆಗೆ ಪ್ರಯಾಣಿಸುತ್ತಿದ್ದರು. ಕೋಝಿಕ್ಕೋಡ್​ನಿಂದ ಸುಲ್ತಾನ್​ ಬತೇರಿ ಕಡೆಗೆ ಸಾಗುತ್ತಿದ್ದಾಗ ಬಸ್​ ಡಿಕ್ಕಿ ಹೊಡೆದಿದೆ. ವಾಹನದಡಿ ಸಿಲುಕಿದ್ದವರನ್ನು ಅಗ್ನಿಶಾಮಕ ತಂಡ ಹೊರಗೆಳೆದು ರಕ್ಷಿಸಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ವ್ಯಾನ್​ನಲ್ಲಿ 9 ಮಂದಿ ಪ್ರಯಾಣಿಸುತ್ತಿದ್ದರು. ಜೆನ್ಸನ್​ ವಾಹನ ಚಲಾಯಿಸುತ್ತಿದ್ದರು. ಈ ಅಪಘಾತದ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ.

 

Post a comment

No Reviews