
ಮಂಗಳೂರು: ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೊಬ್ಬ ಆರೋಪಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ.
ರಿಯಾಜ್ ಯೂಸಫ್ ಹಾರಳ್ಳಿ ಅಲಿಯಾಸ್ ರಿಯಾಜ್ ಬಂಧಿತ ಆರೋಪಿ. ರಿಯಾಜ್ ಯೂಸಫ್ ಹಾರಳ್ಳಿ ವಿದೇಶಕ್ಕೆ ಹೋಗಲು ಯತ್ನಿಸುತ್ತಿದ್ದ. ಈ ವೇಳೆ ಮುಂಬೈ ವಿಮಾನ ನಿಲ್ದಾಣದಲ್ಲಿ ಆರೋಪಿಯನ್ನು ಎನ್‌ಐಎ ಬಂಧಿಸಿದೆ. ರಿಯಾಜ್ ಬಂಧನದಿಂದ ಪ್ರಕರಣದಲ್ಲಿಈವರೆಗೆ ಬಂಧಿತರಾಗಿರುವ ಒಟ್ಟು ಆರೋಪಿಗಳ ಸಂಖ್ಯೆ 19ಕ್ಕೆ ಏರಿಕೆಯಾಗಿದೆ. ಕಳೆದ ತಿಂಗಳು ಮನ್ಸೂರ್ ಪಾಷಾ ಜತೆಗೆ ತಲೆಮರೆಸಿಕೊಂಡಿದ್ದ ಮುಸ್ತಫಾ ಪೈಚಾರ್ ನನ್ನು ಬಂಧಿಸಿದ ಒಂದು ತಿಂಗಳ ನಂತರ ರಿಯಾಜ್ ಬಂಧನವಾಗಿದೆ.
Poll (Public Option)

Post a comment
Log in to write reviews