
ಆಧ್ರಪ್ರದೇಶ :ಮಲಯಾಳಂ ಸಿನಿಮಾ ಸಹ ನಿರ್ದೇಶಕ ಹಾಗೂ ಖ್ಯಾತ ಶಿಲ್ಪಿ ಅನಿಲ್ ಕ್ಸೇವಿಯರ್ ಕೊಚ್ಚಿಯಲ್ಲಿ ನಿಧನರಾಗಿದ್ದಾರೆ.
ಅವರಿಗೆ 39ವರ್ಷ ವಯಸ್ಸಾಗಿತ್ತು.ಅನಿಲ್ ಹೃದಯ ಸಂಬಂಧಿತ ಕಾಯಿಲೆಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೇ ನಿಧನರಾಗಿದ್ದಾರೆ.ಕ್ಸೇವಿಯರ್ ಜಾನ್ ಎ ಮ್ಯಾನ್, ತಲ್ಲುಮಾಲಾ, ಮಂಜುಮ್ಮಲ್ ಬಾಯ್ಸ್ ಮತ್ತು ತೆಕ್ ವಡಕ್‌ನಂತಹ ಚಿತ್ರಗಳಿಗೆ ಸಹ ನಿರ್ದೇಶಕರಾಗಿದ್ದರು.
ಅನಿಲ್ ಅವರ ಪಾರ್ಥಿವ ಶರೀರವನ್ನು ವೈದ್ಯಕೀಯ ವಿದ್ಯಾರ್ಥಿಗಳಿಗೆ ಅಧ್ಯಯನಕ್ಕಾಗಿ ದಾನ ಮಾಡುವ ನಿರ್ದಾರವನ್ನು ಸಂಬಂಧಿಕರು ತಿಳಿಸಿದ್ದಾರೆ. ಇಂದು ಬೆಳಗ್ಗೆ 11 ಗಂಟೆಯಿಂದ ನಿವಾಸದಲ್ಲಿ ಸಾರ್ವಜನಿಕ ದರ್ಶನ ಹಾಗೂ ಮಧ್ಯಾಹ್ನ 3 ಗಂಟೆಯವರೆಗೆ ನಾಸ್ ಸಭಾಂಗಣದಲ್ಲಿ ಸಾರ್ವಜನಿಕ ದರ್ಶನಕ್ಕೆ ಪ್ರಾರ್ಥಿವ ಶರೀರ ಇಡಲಾಗಿದೆ.
ತ್ರಿಪುನಿಥುರಾದ ಆರ್‌ಎಲ್‌ವಿ ಕಾಲೇಜಿನಲ್ಲಿ ಬಿಎಫ್‌ಎ ಮುಗಿಸಿದ ನಂತರ, ಅನಿಲ್ ಹೈದರಾಬಾದ್‌ನ ಕೇಂದ್ರೀಯ ವಿಶ್ವವಿದ್ಯಾಲಯದಿಂದ ಶಿಲ್ಪಕಲೆಯಲ್ಲಿ ಎಂಎಫ್‌ಎ ಮಾಡಿದರು.ಅವರು ತಮ್ಮ ಪತ್ನಿ ಮತ್ತು ಕಲಾವಿದೆ ಅನುಪಮಾ ಇಲಿಯಾಸ್ ಅವರೊಂದಿಗೆ ಅಂಗಮಾಲಿಯನ್ನು ಕೇಂದ್ರವಾಗಿಟ್ಟುಕೊಂಡು ಕಲೆಯನ್ನು ಅಭ್ಯಾಸ ಮಾಡುತ್ತಿದ್ದರು. ಕಲಾ ಜಗತ್ತಿಗೆ ಗಮನಾರ್ಹ ಕೊಡುಗೆಗಳನ್ನು ನೀಡಿದ್ದಾರೆ
Poll (Public Option)

Post a comment
Log in to write reviews