ಆಂಧ್ರ-ತೆಲಂಗಾಣ ಪ್ರವಾಹ: ಎರಡೂ ರಾಜ್ಯಗಳಿಗೆ ಒಂದು ಕೋಟಿ ರೂಪಾಯಿ ನೆರವು ಘೋಷಿಸಿದ ಜೂ ಎನ್ಟಿಆರ್

ಎರಡೂ ಸರ್ಕಾರಗಳು ಸಂತ್ರಸ್ತರ ನೆರವಿಗೆ ಪ್ರಯತ್ನಿಸುತ್ತಿದ್ದು, ಇದೀಗ ಸಿನಿಮಾ ನಟರು ಸಹ ಸಂತ್ರಸ್ತರ ಸಹಾಯಕ್ಕೆ ಧಾವಿಸಿದ್ದಾರೆ. ಬಂಗಾಳ ಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತದಿಂದಾಗಿ ಆಂಧ್ರ ಪ್ರದೇಶ ಹಾಗೂ ತೆಲಂಗಾಣದಲ್ಲಿ ಕಳೆದ ಕೆಲ ದಿನಗಳಿಂದ ಭಾರಿ ಮಳೆಯಾಗುತ್ತಿದ್ದು ಜನಜೀವನ ಅಸ್ಥವ್ಯಸ್ಥವಾಗಿದೆ. ಎರಡು ರಾಜ್ಯಗಳಲ್ಲಿ ಈವರೆಗೆ ಸುಮಾರು 40 ಮಂದಿ ಮಳೆಗೆ ಆಹುತಿಯಾಗಿ, ನೂರಾರು ಮಂದಿ ಮನೆ, ಆಸ್ತಿಗಳನ್ನು ಕಳೆದುಕೊಂಡಿದ್ದು, ನಟ ಜೂ ಎನ್ಟಿಆರ್ರವರು ಎರಡೂ ರಾಜ್ಯಗಳಿಗೆ ಒಂದು ಕೋಟಿ ರೂಪಾಯಿ ನೆರವು ಘೋಷಿಸಿದ್ದಾರೆ.
ಕರ್ನಾಟಕ ಪ್ರವಾಸದಲ್ಲಿದ್ದ ನಟ ಜೂ ಎನ್ಟಿಆರ್ರವರು ʼನನ್ನ ಕಡೆಯಿಂದ ಆಂಧ್ರಪ್ರದೇಶ ಮತ್ತು ತೆಲಂಗಾಣ ಸರ್ಕಾರಗಳ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಎರಡು ತೆಲುಗು ರಾಜ್ಯಗಳ ಸರ್ಕಾರಗಳು ಪ್ರವಾಹ ವಿಕೋಪದಿಂದ ಪರಿಹಾರಕ್ಕಾಗಿ ಕೈಗೊಂಡ ಕ್ರಮಗಳಿಗೆ ಸಹಾಯ ಮಾಡಲು ತಲಾ 50 ಲಕ್ಷ ದೇಣಿಗೆಯನ್ನು ಘೋಷಿಸುತ್ತಿದ್ದೇನೆ’ ಎಂದಿದ್ದಾರೆ. ಆ ಮೂಲಕ ಆಂಧ್ರ-ತೆಲಂಗಾಣ ಜನರ ನೆರವಿಗೆ ಬಂದ ಮೊದಲ ನಟ ಎನಿಸಿಕೊಂಡಿದ್ದಾರೆ.
‘ಕಲ್ಕಿ’ ಸಿನಿಮಾ ತಂಡವೂ ಸಹ ತಲಾ 25 ಲಕ್ಷ ರೂಪಾಯಿಗಳ ನೆರವು ಘೋಷಣೆ ಮಾಡಿದೆ. ಜೂ ಎನ್ಟಿಆರ್ ಬಳಿಕ ಇನ್ನಷ್ಟು ನಟರು ನೆರವು ಘೋಷಿಸುವ ಸಾಧ್ಯತೆ ಇದೆ.
ಜೂ ಎನ್ಟಿಆರ್ ಕಳೆದ ಕೆಲ ದಿನಗಳಿಂದಲೂ ಕರ್ನಾಟಕದಲ್ಲಿ ವಾಸ್ತವ್ಯ ಹೂಡಿದ್ದರು. ತಾಯಿ, ಪತ್ನಿಯೊಂದಿಗೆ ಕರ್ನಾಟಕಕ್ಕೆ ಬಂದಿದ್ದ ಜೂ ಎನ್ಟಿಆರ್, ತಾಯಿಯ ಆಸೆಯಂತೆ ಅವರ ಹುಟ್ಟೂರಾದ ಕುಂದಾಪುರ, ಉಡುಪಿ ಕೃಷ್ಣನ ದರ್ಶನವನ್ನು ಮಾಡಿಸಿದರು. ಈ ವೇಳೆ ನಟ, ನಿರ್ದೇಶಕ ರಿಷಬ್ ಶೆಟ್ಟಿ ಸಹ ಜೊತೆಗಿದ್ದರು. ಅದಾದ ಬಳಿಕ ರಿಷಬ್ ಶೆಟ್ಟಿ, ಪ್ರಮೋದ್ ಶೆಟ್ಟಿ, ಪ್ರಶಾಂತ್ ನೀಲ್ ಇನ್ನಿತರರ ಜೊತೆಗೆ ಕರಾವಳಿಯ ಕೆಲವು ಸುಂದರ ತಾಣಗಳಲ್ಲಿ ಜೂ ಎನ್ಟಿಆರ್ ಸುತ್ತಾಡಿದ್ದಾರೆ. ಬಸ್ರೂರು ಮ್ಯೂಸಿಕ್ ಸ್ಟುಡಿಯೋಗೆ ಸಹ ಭೇಟಿ ನೀಡಿದ್ದರು.
Poll (Public Option)

Post a comment
Log in to write reviews