ತರಬೇತಿ ಪಡೆದ ಅತ್ಯುತ್ತಮ 8 ಆನೆಗಳ ನೀಡಿ ಎಂದು ಕರ್ನಾಟಕಕ್ಕೆ ಬೇಡಿಕೆಯಿಟ್ಟ ಆಂಧ್ರಪ್ರದೇಶ.

ಮೈಸೂರು: ಭಾರತ ದೇಶದಲ್ಲಿ ಅತಿ ಹೆಚ್ಚು ಆನೆಗಳಿರುವ ರಾಜ್ಯವೆಂದರೆ ಅದು ಕರ್ನಾಟಕ. ಇಲ್ಲಿ ಸುಮಾರು 6300ಕ್ಕೂ ಹೆಚ್ಚು ಆನೆಗಳಿವೆ. ಕರ್ನಾಟಕದಲ್ಲಿ ಒಟ್ಟು 14 ಆನೆ ಶಿಬಿರಗಳಿವೆ. ಹೀಗಾಗಿ ರಾಜ್ಯದ ಆನೆಗಳ ಮೇಲೆ ಮೊದಲಿನಿಂದಲೂ ಬೇರೆ ಬೇರೆ ರಾಜ್ಯಗಳು ಕಣ್ಣಿಟ್ಟಿವೆ. ಈ ಬಾರಿ ನೆರೆಯ ಆಂಧ್ರ ಪ್ರದೇಶವು ರಾಜ್ಯದ ಎಂಟು ಆನೆಗಳನ್ನು ತನಗೆ ನೀಡುವಂತೆ ಬೇಡಿಕೆ ಇಟ್ಟಿದ್ದು ಅದರಲ್ಲೂ ಚೆನ್ನಾಗಿ ಪಳಗಿದ ಅತ್ಯುತ್ತಮ ಆನೆಗಳನ್ನೇ ನೀಡಿ ಎಂಬುದಾಗಿ ಹೇಳಿದೆ.
ಕೆಲ ದಿನಗಳ ಹಿಂದಷ್ಟೇ ನಾಗರಹೊಳೆಯ ಮತ್ತಿಗೋಡು ಹಾಗೂ ಕೊಡಗಿನ ದುಬಾರೆ ಸಾಕಾನೆ ಶಿಬಿರಕ್ಕೆ ಆಂಧ್ರದ ಮೂವರು ಅರಣ್ಯಾಧಿಕಾರಿಗಳು ಭೇಟಿ ನೀಡಿ ತಮಗೆ ಬೇಕಾದ ಆನೆಗಳನ್ನು ಆಯ್ಕೆ ಮಾಡಿ ಹೋಗಿದ್ದಾರೆ. ಆಂಧ್ರಪ್ರದೇಶದಲ್ಲೂ ಕಾಡಾನೆಗಳ ಉಪಟಳ ಹೆಚ್ಚಾಗಿದ್ದು ರೈತರ ಜಮೀನಿಗೆ ನುಗ್ಗಿ ಆನೆಗಳು ದಾಂಧಲೆ ಮಾಡುವುದು ಸಾಮಾನ್ಯವಾಗಿದೆ. ಹೀಗಾಗಿ ಆನೆ ಸೆರೆ ಕಾರ್ಯಾಚರಣೆಯಲ್ಲಿ ಬಳಸಲು ಆಂಧ್ರಪ್ರದೇಶ ರಾಜ್ಯದ ಆನೆಗಳ ಮೇಲೆ ಕಣ್ಣಿಟ್ಟಿದೆ. ಹೀಗಾಗಿ ಕರ್ನಾಟಕದ ಪಳಗಿದ ಆನೆಗಳನ್ನು ನೀಡುವಂತೆ ಕೇಳುತ್ತಿದೆ. ಆದರೆ ಈ ಬೇಡಿಕೆಯು ಪ್ರಾಣಿಪ್ರಿಯರ ಕಣ್ಣನ್ನು ಕೆಂಪಗಾಗಿಸಿದ್ದು ಯಾವುದೇ ಕಾರಣಕ್ಕೂ ರಾಜ್ಯದ ಆನೆಗಳನ್ನು ಆಂಧ್ರಪ್ರದೇಶಕ್ಕೆ ಕೊಡಬಾರದು. ಈ ಪ್ರಸ್ತಾವನೆಗೆ ಕರ್ನಾಟಕ ಸರಕಾರ ಸಮ್ಮತಿ ನೀಡಬಾರದು ಎಂದು ಒತ್ತಾಯಿಸಿದ್ದಾರೆ.
Poll (Public Option)

Post a comment
Log in to write reviews