ಅನಂತ್ ಅಂಬಾನಿ- ರಾಧಿಕಾ: ಐಷಾರಾಮಿ ಹಡಗಿನಲ್ಲಿ ಮತ್ತೊಂದು ವಿವಾಹಪೂರ್ವ ಕಾರ್ಯಕ್ರಮ

ಮುಂಬೈ: ಉದ್ಯಮಿ ಮುಕೇಶ್ ಅಂಬಾನಿ ಅವರ ಮಗ ಅನಂತ್ ಅಂಬಾನಿ-ರಾಧಿಕಾ ಮರ್ಚೆಂಟ್ ಅವರ ಮತ್ತೊಂದು ವಿವಾಹಪೂರ್ವ ಕಾರ್ಯಕ್ರಮಕ್ಕೆ ವೇದಿಕೆ ಸಜ್ಜಾಗಿದೆ ಎಂದು ತಿಳಿದು ಬಂದಿದೆ.
ಗುಜರಾತ್‌ನ ಜಾಮ್‌ನಗರದಲ್ಲಿ ಇತ್ತೀಚೆಗೆ ನಡೆದ ಮೊದಲ ವಿವಾಹಪೂರ್ವ ಕಾರ್ಯಕ್ರಮದಲ್ಲಿ ಮೆಟಾ ಸಂಸ್ಥಾಪಕ ಜುಕರ್‌ಬರ್ಗ್, ಮೈಕ್ರೋಸಾಫ್ಟ್ ಸಹ ಸಂಸ್ಥಾಪಕ ಬಿಲ್ ಗೇಟ್ಸ್, ಪಾಪ್ ತಾರೆ ರಿಹನ್ನಾ, ಕ್ರಿಕೆಟಿಗರಾದ ಸಚಿನ್ ತೆಂಡೂಲ್ಕರ್, ಎಂ.ಎಸ್. ಧೋನಿ, ಬಾಲಿವುಡ್ ತಾರೆಯರಾದ ಸಲ್ಮಾನ್ ಖಾನ್, ಶಾರುಖ್ ಖಾನ್, ಆಲಿಯಾ ಭಟ್, ಕತ್ರಿನಾ ಕೈಫ್, ಜಾಹ್ನವಿ ಕಪೂರ್ ಮುಂತಾದ 1,200 ಅತಿಥಿಗಳು ಭಾಗವಹಿಸಿದ್ದರು.
ಇದೇ 28ರಿಂದ 30ರವರೆಗೆ ಮತ್ತೊಂದು ವಿವಾಹಪೂರ್ವ ಕಾರ್ಯಕ್ರಮ ನಡೆಯಲಿದ್ದು, ಐಷಾರಾಮಿ ಹಡಗಿನಲ್ಲಿ 800 ಮಂದಿ ಅತಿಥಿಗಳಿಗೆ ಆತಿಥ್ಯ ನೀಡಲಿದ್ದಾರೆ. ಈ ಹಡಗು ಇಟಲಿಯಿಂದ ದಕ್ಷಿಣ ಫ್ರಾನ್ಸ್‌ವರೆಗೆ 3 ದಿನಗಳವರೆಗೆ 4380 ಕಿ.ಮೀ ಸಾಗಲಿದೆ. ಅತಿಥಿಗಳ ಪಟ್ಟಿಯಲ್ಲಿ ಸಲ್ಮಾನ್ ಖಾನ್, ಶಾರುಖ್ ಖಾನ್, ಅಮೀರ್ ಖಾನ್, ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ ಸಹ ಇದ್ದಾರೆ. 800 ಅತಿಥಿಗಳನ್ನು ಹೊರತುಪಡಿಸಿ, 600 ಮಂದಿ ಆತಿಥ್ಯ ಸಿಬ್ಬಂದಿ ಸಹ ಉಪಸ್ಥಿತರಿರುತ್ತಾರೆ. ಮದುವೆ ಲಂಡನ್‌ನಲ್ಲಿ ನಡೆಯುವ ಸಾಧ್ಯತೆ ಇದೆ ಎಂದು ವರದಿಯಾಗಿದೆ.
Poll (Public Option)

Post a comment
Log in to write reviews