2024-12-24 07:24:47

News broadcasting is the medium of broadcasting various news events and other information via television, radio, or the internet in the field of broadcast journalism.

Get In Touch

  • info@samayanews.tv
  • 8050000444
  • Samaya News, 48, 2nd Floor, 2nd Main, 2nd Cross, Ganganagar, Muthappa Block, RT Nagar, Bengaluru, Karnataka 560032

ಕನ್ನಡ ಚಿತ್ರರಂಗಕ್ಕೆ ಸಮಿತಿ ರಚನೆಯ ಬಗ್ಗೆ ಫಿಲ್ಮ್ ಚೇಂಬರ್​ನಲ್ಲಿ ಮಹತ್ವದ ಸಭೆ

ಬೆಂಗಳೂರು: ನ್ಯಾಯಮೂರ್ತಿ ಹೇಮಾ ಸಮಿತಿ ವರದಿ ಮಲಯಾಳಂ ಚಿತ್ರರಂಗವನ್ನು ನಡುಗಿಸಿದೆ. ಮಾಲಿವುಡ್​​​ನ ಕರಾಳ ಮುಖವನ್ನು ಈ ವರದಿ ಬಯಲಿಗೆಳೆದಿದ್ದು, ಆರೋಪ ಪ್ರತ್ಯಾರೋಪಗಳು ಮುಂದುವರಿದಿದೆ. ಇದರ ಬೆನ್ನಲ್ಲೇ ಕನ್ನಡ ಚಿತ್ರರಂಗದಲ್ಲೂ ಸಮಿತಿ ರಚನೆ ಆಗಬೇಕೆಂಬ ಬೇಡಿಕೆಗಳು ಬಂದಿವೆ. ಕಮಿಟಿ ರಚನೆಗೆ ಇತ್ತೀಚೆಗಷ್ಟೇ 'ಫಿಲ್ಮ್ ಇಂಡಸ್ಟ್ರಿ ಫಾರ್ ರೈಟ್ಸ್ ಅಂಡ್ ಇಕ್ವಾಲಿಟಿ' (ಫೈರ್) ನಿಯೋಗ ಕಾವೇರಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಮನವಿ ಪತ್ರ ಸಲ್ಲಿಸಿತ್ತು. ಇದೀಗ ಈ ಬಗ್ಗೆ ಫಿಲ್ಮ್ ಚೇಂಬರ್​ನಲ್ಲಿ ಮಹತ್ವದ ಸಭೆ ನಡೆಯುತ್ತಿದೆ.

ಫಿಲ್ಮ್ ಚೇಂಬರ್​​ನಲ್ಲಿ ಸಭೆ ಶುರುವಾಗಿದ್ದು, ಕಮಿಟಿ ಬೇಕೋ? ಬೇಡವೋ ಎಂಬುದರ ಕುರಿತು ಚರ್ಚೆ ನಡೆಯುತ್ತಿದೆ. ಫಿಲ್ಮ್ ಚೇಂಬರ್ ಅಧ್ಯಕ್ಷರಾದ ಎನ್​​ಎಮ್ ಸುರೇಶ್, ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ನೇತೃತ್ವದಲ್ಲಿ ಈ ಮೀಟಿಂಗ್ ನಡೆಯುತ್ತಿದ್ದು, ಫಿಲ್ಮ್ ಚೇಂಬರ್ ಪಧಾದಿಕಾರಿಗಳು ಭಾಗಿಯಾಗಿದ್ದಾರೆ.

ನಿರ್ದೇಶಕಿ ಕವಿತಾ ಲಂಕೇಶ್, ನಟಿಯರಾದ ನೀತು ಶೆಟ್ಟಿ, ಭಾವನ ರಾಮಣ್ಣ, ಸಂಜನಾ ಗಲ್ರಾನಿ, ತಾರಾ ಅನುರಾಧ, ಅನಿತಾ ಭಟ್, ಅಶ್ವಿನಿ ಗೌಡ, ವಾಣಿಶ್ರೀ, ಸಿಂಧು ಲೋಕನಾಥ್, ನಿರ್ಮಾಪಕರ ಸಂಘದ ಉಮೇಶ್ ಬಣಕಾರ್, ಫಿಲ್ಮ್ ಚೇಂಬರ್ ಮಾಜಿ ಅಧ್ಯಕ್ಷ ಸಾ.ರಾ ಗೋವಿಂದ್, ಉಪಾಧ್ಯಕ್ಷರಾದ ಪ್ರಮೀಳಾ ಜೋಷಾಯ್ ಸೇರಿದಂತೆ ಸುಮಾರು 20ಕ್ಕೂ ಹೆಚ್ಚು ಜನ ಈ ಸಭೆಯಲ್ಲಿ ಭಾಗಿಯಾಗಿದ್ದಾರೆ.

ಈ ಹಿಂದೆ ಫೈರ್ (FIRE - Film Industry for Rights and Equality)ನ ಸದಸ್ಯರಾದ ಚೇತನ್, ನಟಿ ಶೃತಿ ಹರಿಹರನ್, ನಟಿ ನೀತು ಶೆಟ್ಟಿ ಸೇರಿದಂತೆ ನಿಯೋಗ ರಾಜ್ಯದ ಮುಖ್ಯಮಂತ್ರಿಯನ್ನು ಭೇಟಿ ಮಾಡಿತ್ತು. ಕೇರಳದ ನ್ಯಾಯಮೂರ್ತಿ ಹೇಮಾ ಸಮಿತಿಯಂತೆ ರಾಜ್ಯದಲ್ಲೂ ಕಮಿಟಿ ಒಂದು ರಚನೆ ಆಗಬೇಕೆಂಬ ಬೇಡಿಕೆ ಇಟ್ಟಿದ್ದರು. 153 ಜನ ಸಹಿ ಮಾಡಿರುವ ಮನವಿ ಪತ್ರ ಕೂಡಾ ಸರ್ಕಾರಕ್ಕೆ ತಲುಪಿದೆ.

153 ಜನರ ಸಹಿ: ಚಿತ್ರರಂಗ ಸೇರಿದಂತೆ ವಿವಿಧ ಕ್ಷೇತ್ರಗಳ 153 ಗಣ್ಯರು ಮನವಿ ಪತ್ರಕ್ಕೆ ಸಹಿ ಹಾಕಿ ಬೆಂಬಲ ಸೂಚಿಸಿದ್ದಾರೆ. ಪತ್ರಕ್ಕೆ ನಿರ್ದೇಶಕಿ ಕವಿತಾ ಲಂಕೇಶ್, ನಿರ್ದೇಶಕರಾದ ಬಿ. ಸುರೇಶ್‌, ಪವನ್‌ಕುಮಾರ್‌, ಚೈತನ್ಯ ಕೆ.ಎಂ, ಗಿರಿರಾಜ್‌ ಬಿ. ಎಂ, ಜಯತೀರ್ಥ, ನಟರಾದ ಸುದೀಪ್‌, ಕಿಶೋರ್‌, ದಿಗಂತ್‌, ಸಿಹಿ ಕಹಿ ಚಂದ್ರು, ವಿನಯ್‌ ರಾಜ್‌ಕುಮಾರ್‌, ನಟಿ ಪೂಜಾ ಗಾಂಧಿ, ನೀತು ಶೆಟ್ಟಿ, ಶ್ರುತಿ ಹರಿಹರನ್‌, ಐಂದ್ರಿತಾ ರೇ, ಅಮೃತಾ ಅಯ್ಯಂಗಾರ್‌, ಚೈತ್ರಾ ಜೆ.ಆಚಾರ್‌, ಸಾಹಿತಿಗಳಾದ ವಿಜಯ್‌ ಶಂಕರ್‌, ರಹಮತ್‌ ತರಿಕೇರೆ, ಬಂಜಗೆರೆ ಜಯಪ್ರಕಾಶ್‌ ಸೇರಿದಂತೆ ಅನೇಕ ಕಲಾವಿದರು, ನಿರ್ದೇಶಕರು, ಬರಹಗಾರರು, ಸಾಹಿತಿಗಳು ಸಹಿ ಹಾಕಿದ್ದಾರೆ.

Post a comment

No Reviews