
ಕಣ್ಣೂರು: ಜಮೀನಿನಲ್ಲಿ ಬಾಂಬ್ ಸ್ಫೋಟಗೊಂಡು 86 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ಕೇರಳದ ಕಣ್ಣೂರು ಜಿಲ್ಲೆಯ ತಲಸ್ಸೇರಿ ಬಳಿಯಲ್ಲಿ ನಡೆದಿದೆ.
ಬಾಂಬ್ ಸ್ಫೋಟದಿಂದ ಕುಡಕ್ಕಲಮ್ ಗ್ರಾಮದ ಆಯಿನಾತ್ ವೇಲಾಯುಧನ್ ಅವರು ಮೃತಪಟ್ಟಿದ್ದಾರೆ. ಆಯಿನಾತ್ ಅವರು ಜಮೀನಿನಲ್ಲಿ ತೆಂಗಿನಕಾಯಿ ಸಂಗ್ರಹಿಸಲು ಹೋದಾಗ, ಬಾಂಬ್ ಇದ್ದ ಪೊಟ್ಟಣ ಕಂಡಿದೆ. ಅದನ್ನು ಅವರು ಎತ್ತಿಕೊಂಡು, ತೆಗೆದು ನೋಡಿದಾಗ ಅದು ಸ್ಫೋಟಗೊಂಡಿದೆ.
ಬಾಂಬ್ ಸ್ಫೋಟದ ಕುರಿತು ತನಿಖೆ ಆರಂಭಿಸಲಾಗಿದೆ. ಪ್ರಾಥಮಿಕ ತನಿಖೆಯ ಪ್ರಕಾರ ಇದು ಸ್ಟೀಲ್ ಬಾಂಬ್ ಎಂದು ಕಂಡುಬಂದಿದೆ ಎಂದು ಜಿಲ್ಲೆಯ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಸುದ್ದಿಗಾರರಿಗೆ ತಿಳಿಸಿದ್ದಾರೆ.
ಬಾಂಬ್ ಸ್ಫೋಟಗೊಂಡ ಸ್ಥಳದಲ್ಲಿ ಬಾಂಬ್ ನಿಷ್ಕ್ರೀಯ ದಳದ ಸಿಬ್ಬಂದಿ ಪರಿಶೀಲನೆ ನಡೆಸಿದ್ದಾರೆ. ಮೃತ ವ್ಯಕ್ತಿಯ ಮರಣೋತ್ತರ ಪರೀಕ್ಷೆಯನ್ನು ಬುಧವಾರ ನಡೆಸಲಾಗುತ್ತದೆ.
ಮರಣೋತ್ತರ ವರದಿ ಬಂದ ಬಳಿಕ ಇನ್ನಷ್ಟು ಮಾಹಿತಿ ದೊರೆಯಲಿದೆ ಎಂಬುದಾಗಿ ತಲಸ್ಸೇರಿ ಪೊಲೀಸರು ಮಾಹಿತಿ ನೀಡಿದ್ದಾರೆ.
Poll (Public Option)

Post a comment
Log in to write reviews