
ತೆಲಂಗಾಣದಲ್ಲಿ ಇತ್ತೀಚೆಗೆ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ, ಮುಸ್ಲಿಮರಿಗೆ ತೆಲಂಗಾಣ ಸರ್ಕಾರ ನೀಡಿರುವ ಮೀಸಲಾತಿ ಸಂವಿಧಾನ ಬಾಹಿರ ಎಂದು ವಾಗ್ದಾಳಿ ನಡೆಸಿದ್ರು. ಇದರಿಂದಾಗಿ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗ ಹಾಗೂ ಇತರೆ ಹಿಂದುಳಿದ ವರ್ಗಗಳಿಗೆ ಅನ್ಯಾಯವಾಗಿದೆ ಎಂದೂ ದೂಷಿಸಿದ್ದರು.
ಆದರೆ ಈ ವೀಡಿಯೋವನ್ನು ತಿರುಚಲಾಗಿದ್ದು, ಎಸ್ ಸಿ, ಎಸ್ ಟಿ ಗೆ ನೀಡಲಾಗಿರುವ ಮೀಸಲಾತಿ ಸರಿಯಲ್ಲ ಎಂದು ಶಾ ಹೇಳಿದ್ದಾಗಿ ತಪ್ಪಾಗಿ ಬಿಂಬಿಸಲಾಗಿದೆ ಎಂದು ಬಿಜೆಪಿ ದೆಹಲಿ ಪೊಲೀಸರಿಗೆ ದೂರು ಸಲ್ಲಿಸಿದೆ. ಈ ಸಂಬಂಧ ಎಫ್ ಐ ಆರ್ ದಾಖಲಾಗಿದ್ದು, ತನಿಖೆ ಆರಂಭವಾಗಿದೆ.
ಈ ತಿರುಚಲ್ಪಟ್ಟ ವೀಡಿಯೋವನ್ನು ಕಾಂಗ್ರೆಸ್ ಟ್ವೀಟ್ ಮಾಡಿತ್ತು.
Tags:
Poll (Public Option)

Post a comment
Log in to write reviews