2024-09-19 04:39:29

News broadcasting is the medium of broadcasting various news events and other information via television, radio, or the internet in the field of broadcast journalism.

Get In Touch

  • info@samayanews.tv
  • 8050000444
  • Samaya News, 48, 2nd Floor, 2nd Main, 2nd Cross, Ganganagar, Muthappa Block, RT Nagar, Bengaluru, Karnataka 560032

ಅಂಬಟಿ ರಾಯುಡುಗೆ ಆರ್ಸಿಬಿ ಅಭಿಮಾನಿಗಳಿಂದ ತರಾಟೆ. 

ಆರ್‌ಸಿಬಿ ತನ್ನ ಮೊದಲ 8 ಪಂದ್ಯಗಳಲ್ಲಿ ಕೇವಲ 1 ಗೆಲುವನ್ನು ದಾಖಲಿಸಿ, 7ರಲ್ಲಿ ಸೋಲು ಕಂಡಿತ್ತು. ನಂತರ ಸತತ 6 ಗೆಲುವು ಸಾಧಿಸಿ ಪ್ಲೇ ಆಫ್ಗೆ ಎಂಟ್ರಿಕೊಟ್ಟಿತು. ಆದರೆ ಎಲಿಮಿನೇಟರ್ ಪಂದ್ಯದಲ್ಲಿ ಆರ್‌ಸಿಬಿ ಸೋಲಿನ ನಂತರ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ಮಾಜಿ ಕ್ರಿಕೆಟಿಗ ಅಂಬಟಿ ರಾಯುಡು ಆರ್ಸಿಬಿ ತಂಡ ಹಾಗೂ ಫ್ಯಾನ್ಸ್ ಕುರಿತು ವ್ಯಂಗ್ಯ ಮಾಡಿದ್ದರು. ಕಳೆದ ವರ್ಷ ಚೆನ್ನೈ ಸೂಪರ್‌ ಕಿಂಗ್ಸ್‌ ಚಾಂಪಿಯನ್‌ ಆಗಿ ಹೊರಹೊಮ್ಮಿತ್ತು. ಇದಾದ ಬಳಿಕ ತಂಡ ಟೀಂ ಬಸ್‌‌ನಲ್ಲಿ ಪ್ರಯಾಣಿಸುವಾಗ ಆಟಗಾರರು 5 ಟೈಂ ಚಾಂಪಿಯನ್‌ ಎಂದು ಮಾಡಿದ್ದ ವಿಡಿಯೋ ಮತ್ತೆ ಆರ್‌‌ಸಿಬಿ ಸೋಲಿನ ನಂತರ ವೈರಲ್‌ ಆಗುತ್ತಿದೆ. ಇದೇ ವಿಡಿಯೋವನ್ನು ರಾಯಡು ಹಂಚಿಕೊಂಡಿದ್ದು, ಜಸ್ಟ್ ರಿಮೈಂಡರ್‌ ಎಂದು ಬರೆದಿದ್ದಾರೆ.
ಇದಕ್ಕೆ ಅನೇಕ ಆರ್‌‌ಸಿಬಿ ಅಭಿಮಾನಿಗಳು ವಿರೋಧ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಓರ್ವ ಕ್ರಿಕೆಟ್‌ರ್ ಆಗಿ ಅಭಿಮಾನಿಗಳ ರೀತಿಯಲ್ಲಿ ಮತ್ತೊಂದು ತಂಡದ ಬಗ್ಗೆ ಮಾತನಾಡಬಾರದು ಎಂದೆಲ್ಲಾ ಹೇಳುತ್ತಿದ್ದಾರೆ. ಹೌದು, ರಾಯುಡು ಪೋಸ್ಟ್ ಗೆ ದೀಪಕ್‌ ಚಹಾರ್‌ ಹಾಗೂ ಮಹೀಶ ಪತಿರಾಣ ಜಸ್ಟ್‌ ಯೆಲ್ಲೋ ಹಾರ್ಟ್‌‌ ಇಮೋಜಿ ಹಾಕಿ ಕಾಮೆಂಟ್ ಮಾಡಿದ್ದಾರೆ. ಇದೀಗ ಈ ಫೋಟೋಗಳು ವೈರಲ್‌ ಆಗುತ್ತಿದ್ದು, ಚೆನ್ನೈ ತಂಡದ ಆಟಗಾರರ ಮೇಲೆ ಆರ್‌‌ಸಿಬಿ ಅಭಿಮಾನಿಗಳು ಸಿಟ್ಟಾಗಿದ್ದು, ರಾಯಡು ಫೋಸ್ಟ್‌ ಸಖತ್‌ ಟ್ರೋಲ್‌ ಆಗುತ್ತಿದೆ.ಬುಧವಾರ ನಡೆದ ಪಂದ್ಯದಲ್ಲಿ ಆರ್‌ಸಿಬಿ ಸೋಲಿನ ಬಗ್ಗೆ ಮಾತನಾಡಿದ ಅಂಬಟಿ ರಾಯುಡು, ‘ಆರ್‌ಸಿಬಿ ಕೇವಲ ಆಕ್ರಮಣ ಮನೋಭಾವ ಅಥವಾ ಸಂಭ್ರಮದಿಂದ ಟ್ರೋಫಿ ಗೆಲ್ಲಲು ಸಾಧ್ಯವಿಲ್ಲ. ಪ್ಲೇಆಫ್ ತಲುಪಿದ ಮಾತ್ರಕ್ಕೆ ನೀವು ಟ್ರೋಫಿ ಗೆಲ್ಲೋಕೆ ಸಾಧ್ಯವಿಲ್ಲ, ಸಿಎಸ್‌ಕೆಯನ್ನು ಸೋಲಿಸುವ ಮೂಲಕ ನೀವು ಟ್ರೋಫಿಯನ್ನು ಗೆಲ್ಲಬಹುದು ಎಂದು ಭಾವಿಸಬೇಡಿ ಎಂದಿದ್ದರು.
ಇದಲ್ಲದೇ ಆರ್‌ಸಿಬಿ ಅಭಿಮಾನಿಗಳು ಸಿಎಸ್‌ಕೆ ಅಭಿಮಾನಿಗಳನ್ನು ತೀವ್ರವಾಗಿ ಟ್ರೋಲ್ ಮಾಡಿದ್ದರು. ಆರ್‌ಸಿಬಿ ಅಭಿಮಾನಿಗಳ ಕೆಟ್ಟ ವರ್ತನೆಯ ಹಲವು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದವು. RCB vs CSK ಪಂದ್ಯದಲ್ಲಿ ಎಂಎಸ್ ಧೋನಿ ಕೊನೆಯ ಓವರ್‌ನಲ್ಲಿ ಔಟಾದಾಗ, ರಾಯುಡು ಕಾಮೆಂಟರಿ ಬಾಕ್ಸ್‌ನಲ್ಲಿದ್ದರು ಮತ್ತು ಅವರ ಪ್ರತಿಕ್ರಿಯೆಯೂ ವೈರಲ್ ಆಗಿತ್ತು. ಧೋನಿ ಔಟಾಗುವುದರೊಂದಿಗೆ ಸಿಎಸ್‌ಕೆ ಪ್ಲೇಆಫ್‌ ತಲುಪುವ ಆಸೆ ನಿರಾಸೆಯಾಗಿದ್ದರಿಂದ ರಾಯುಡು ಭಾವುಕರಾಗಿದ್ದರು.

Post a comment

No Reviews