
ಮುಕೇಶ್ ಅಂಬಾನಿ ಅವರ ಕಿರಿಯ ಮಗ ಅನಂತ್ ಅಂಬಾನಿಯ ಮರ್ಚಂಟ್ ವಿವಾಹ ಮಹೋತ್ಸವ ಬಹಳ ವಿಜೃಂಭಣೆಯಿಂದ ಹೈದರಾಬಾದ್‌ನಲ್ಲಿ ಮೇ 23 ರಂದು ನಡೆದಿದೆ. ವಿಶೇಷ ಅತಿಥಿಯಾಗಿ ಬಿಲ್ ಗೇಟ್ಸ್, ಮಾರ್ಕ್ ಜುಗರ್‌ಬರ್ಕ್ ಮೊದಲಾದ ದಿಗ್ಗಜರು, ಕೆಲ ದೇಶಗಳ ಪ್ರಧಾನಿಗಳು, ಅಧ್ಯಕ್ಷರು ಈ ಕಾರ್ಯಕ್ರಮಕ್ಕೆ ಆಗಮಿಸಿದ್ದರು.
ಆಗಮಿಸಿದ್ದ ಅತಿಥಿಗಳಿಗೆ ಭಾರತೀಯ ಮೂಲದ ಫಿಲಿಗ್ರಿ ಕಲಾಕೃತಿಗಳನ್ನು ವಿಶೇಷ ಉಡುಗೊರೆ ನೀಡಲಾಗಿದೆ. ಮುಂಬೈನ ಕಲ್ಚರಲ್ ಸೆಂಟರ್ ನಲ್ಲಿ ಕೆಲ ವರ್ಷಗಳ ಹಿಂದೆ ನಡೆದ ಕಲಾ ಉತ್ಸವದಲ್ಲಿ ಸಿಫ್ಕಾ ಅಧ್ಯಕ್ಷ ಆರೋಜು ಅಶೋಕ್ ಅವರು ಸಿಲ್ವರ್ ಫಿಲಿಗ್ರಿ ಕಲೆಯ ವಸ್ತುಗಳನ್ನು ಪ್ರದರ್ಶನಕ್ಕಿಟ್ಟಿದ್ದರು. ಈ ಕಲಾಕೃತಿಗಳು ನೀತಾ ಅಂಬಾನಿಯ ಗಮನ ಸೆಳೆದಿತ್ತು. ಇವುಗಳನ್ನು ರಿಲಾಯನ್ಸ್ ರೀಟೇಲ್ನ ಸ್ವದೇಶ ಮಳಿಗೆಗೆ ಫ್ರಿಸ್ಕಾ ಮೂಲಕ ಕಳೆದ ನವೆಂಬರ್ ನಿಂದ ಸರಬರಾಜು ಮಾಡಲಾಗುತ್ತಿತ್ತು. ಈ ಕೃತಿಗಳು ಒಳ್ಳೆಯ ಗುಣಮಟ್ಟ ಮತ್ತು ಆಕರ್ಷಣೀಯವಾಗಿರುವುದರಿಂದ ಕಾರ್ಯಕ್ರಮಕ್ಕೆ ಬಂದ ಗಣ್ಯ ಅತಿಥಿಗಳಿಗೆ ಫಿಲಿಗ್ರಿ ಕಲಾಕೃತಿ ನೀಡಿ ಸತ್ಕರಿಸಲಾಗಿದೆ.
Poll (Public Option)

Post a comment
Log in to write reviews