ಭಾರತ
ಪಳನಿ ದೇಗುಲದ ಪ್ರಸಾದದಲ್ಲಿ ದುರ್ಬಲತೆ ಔಷಧಿ ಬೆರೆಕೆ ಆರೋಪ: ನಿರ್ದೇಶಕ ಮೋಹನ್ ಜಿ ಅರೆಸ್ಟ್

ಚೆನ್ನೈ: ದೇವಸ್ಥಾನದಲ್ಲಿ ನೀಡುವ ಪಂಚಾಮೃತ ಪ್ರಸಾದಕ್ಕೆ ಪುರುಷರಲ್ಲಿ ದುರ್ಬಲತೆ ಉಂಟುಮಾಡುವ ಔಷಧಿ ಬೆರಸಿದ್ದಾರೆ ಎಂಬ ಹೇಳಿಕೆ ನೀಡಿದ ಆರೋಪ ಮೇಲೆ ತಮಿಳು ಚಿತ್ರರಂಗದ ಖ್ಯಾತ ನಿರ್ದೇಶಕ ಮೋಹನ್ ಜಿ ಅವರನ್ನ ಬಂಧಿಸಲಾಗಿದೆ.
ತಿರುಪತಿ ಲಡ್ಡು ಪ್ರಸಾದಕ್ಕೆ ಪ್ರಾಣಿಗಳ ಕೊಬ್ಬು ಬೆರಸಿದ್ದಾರೆ ಎಂಬ ಆರೋಪದ ಬಗ್ಗೆ ನಿರ್ದೇಶಕ ಮೋಹನ್ ಸಂದರ್ಶನವೊಂದರಲ್ಲಿ ಮಾತನಾಡುತ್ತಿದ್ದರು. ಅದೇ ವೇಳೆಗೆ ಚೆನ್ನೈನ ಪಳನಿ ದೇವಸ್ಥಾನದಲ್ಲಿಯೂ ಕೂಡ ಪಂಚಾಮೃತ ಪ್ರಸಾದದಲ್ಲಿ ಪುರುಷರ ದುರ್ಬಲತೆ ಉಂಟುಮಾಡುವ ಔಷಧಿ ಬೆರಸಲಾಗಿದೆ ಎಂದು ಆರೋಪಿಸಿದ್ದರು. ಅವರ ಈ ಹೇಳಿಕೆಯನ್ನು ಆಧರಿಸಿ ತಿರುಚ್ಚಿ ಸೈಬರ್ ಪೊಲೀಸರು ಚೆನ್ನೈನಲ್ಲಿ ಮೋಹನ್ ಅವರನ್ನು ಬಂಧಿಸಿ ತಿರುಚ್ಚಿಗೆ ಕರೆತರಲಾಗುವುದು ಎಂದು ತಿರುಚ್ಚಿ ಜಿಲ್ಲಾ ಎಸ್‌ಪಿ ವರುಣ್ ಕುಮಾರ್ ತಿಳಿಸಿದ್ದಾರೆ.
Poll (Public Option)

Post a comment
Log in to write reviews