ಕಾವೇರಿ ನೀರು ತಮಿಳುನಾಡಿಗೆ ಹರಿಸಲು ವಪ್ಪದ ಸರ್ಕಾರ, ತಮಿಳುನಾಡಿನಲ್ಲಿ ನಾಳೆ ಸರ್ವಪಕ್ಷಗಳ ಸಭೆ

ಬೆಂಗಳೂರು: ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಜುಲೈ.12 ರಿಂದ 31 ರವರೆಗೆ ತಮಿಳುನಾಡಿಗೆ ಪ್ರತಿದಿನ ಒಂದು ಟಿಎಂಸಿ ನೀರನ್ನು ಬಿಡುಗಡೆ ಮಾಡಲು ಸೂಚಿಸಿದೆ. ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಸರ್ವಪಕ್ಷಗಳ ಸಭೆಯಲ್ಲಿ ಪ್ರತಿ ದಿನ 1 ಟಿಎಂಸಿ ನೀಡು ಬಿಡಲು ಆಗೋದಿಲ್ಲ ಎಂದು ನಿರ್ಧಾರ ಮಾಡಲಾಗಿದೆ. ತಮಿಳು ನಾಡಿನ ಸಚಿವ ದೊರೈಮುರುಗನ್ ಅವರು ನಾಳೆ ಸರ್ವಪಕ್ಷಗಳ ಸಭೆ ಕರೆದಿದ್ದಾರೆ.
ಸಚಿವ ದೊರೈಮುರುಗನ್ ನೇತೃತ್ವದಲ್ಲಿ ನಾಳೆ ತಮಿಳುನಾಡಿನ ಪಕ್ಷಗಳ ಸಭೆ ಕರೆಯಲಾಗಿದೆ. ನಿತ್ಯ 1 ಟಿಎಂಸಿ ನೀರು ಹರಿಸುವಂತೆ CWRC ಸೂಚಿಸಿದೆ. ಆದರೆ CWRC ಶಿಫಾರಸ್ಸು ಒಪ್ಪಲು ಕರ್ನಾಟಕ ಸಾಧ್ಯವಿಲ್ಲ ಎಂದಿದೆ. CWMAಗೆ ಮೇಲ್ಮನವಿ ಸಲ್ಲಿಸಲು ಕರ್ನಾಟಕ ನಿರ್ಧರಿಸಿದೆ. ಕರ್ನಾಟಕದ ನಿರ್ಧಾರದ ಬೆನ್ನಲ್ಲೆ ತಮಿಳುನಾಡಿನಲ್ಲಿ ನಾಳೆ ಸರ್ವಪಕ್ಷಗಳ ಸಭೆ ಕರೆಯಲಾಗಿದೆ.
ಜುಲೈ 11ರಂದು ಕಾವೇರಿ ನೀರು ನಿಯಂತ್ರಣ ಸಮಿತಿ 3ನೇ ಸಭೆ ನಡೆಸಿ, ಜುಲೈ 12ರಂದು ಈ ತಿಂಗಳ ಕೊನೆಯವರೆಗೆ ಸುಮಾರು 20 ದಿನ ಪ್ರತೀ ದಿನ 1 ಟಿಎಂಸಿಯಂತೆ 20 ಟಿಎಂಸಿ ನೀರು ಬಿಡಲು ಆದೇಶಿಸಿತ್ತು. ನಾರ್ಮಲ್ ವರ್ಷದಲ್ಲಿ ಜೂನ್ ತಿಂಗಳಲ್ಲಿ 9.4 ಟಿಎಂಸಿ, ಜುಲೈ ನಲ್ಲಿ 31.24 ಟಿಎಂಸಿ ನೀರು ಬಿಡಬೇಕಾಗಿದೆ. ಅಂದರೆ ಒಟ್ಟು 40.43 ಟಿಎಂಸಿ ಬಿಡಬೇಕಾಗಿದೆ. ಇಲ್ಲಿಯವರೆಗೂ 5 ಟಿಎಂಸಿ ಗೂ ಹೆಚ್ಚು ನೀರು ಬಿಡಲು ಸಾಧ್ಯವಾಗಿದೆ.
Poll (Public Option)

Post a comment
Log in to write reviews