
ಐಶ್ವರ್ಯಾ ರೈ ಬಚ್ಚನ್ 2024 ಮೇ 17 ರಂದು ಕೇನ್ಸ್ ಫಿಲ್ಮ್ ಫೆಸ್ಟಿವಲ್ ನಲ್ಲಿ ಎರಡನೇ ಬಾರಿ ಕಾಣಿಸಿಕೊಂಡರು.
ಎರಡನೇ ದಿನವೂ ನಟಿ ರೆಡ್ ಕಾರ್ಪೆಟ್ ಮೇಲೆ ಹೆಜ್ಜೆ ಹಾಕಿ ಎಲ್ಲರ ಗಮನವನ್ನು ಸೆಳೆದರು. ನಟಿ ಸಿಲ್ವರ್ ಮತ್ತು ನೀಲಿ ಬಣ್ಣದ ಗೌನ್ ಮತ್ತು ಫಲ್ಗುಣಿ ಮತ್ತು ಶೇನ್ ಪೀಕಾಕ್ ವಿನ್ಯಾಸಗೊಳಿಸಿದ ಸ್ಕರ್ಟ್ ಅನ್ನು ಧರಿಸಿದ್ದರು.
ನವಿಲಿನ ವಿನ್ಯಾಸದ ಆಕರ್ಷಕವಾದ ಉಡುಪಿನಲ್ಲಿ ಐಶ್ವರ್ಯಾ ರೈ ತುಂಬಾ ಮುದ್ದಾಗಿ ಕಾಣಿಸಿದ್ದಾರೆ. ನಟಿಯ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಎಲ್ಲೆಡೆ ಶೇರ್ ಆಗಿದೆ.
ನಟಿ ಸಿಂಪಲ್ ಮೇಕಪ್ ಮಾಡಿಕೊಂಡು ಸಖತ್ ಆಗಿ ಕಾಣಿಸಿದ್ದಾರೆ. ಆಕರ್ಷಕವಾದ ಹೇರ್ ಸ್ಟೈಲ್ ಮಾಡಿಕೊಂಡು ಅವರು ತಿಳಿ ಬಣ್ಣದ ಶೇಡ್ ನ ಲಿಪ್ಸ್ಟಿಕ್ ಹಚ್ಚಿದ್ದರು. ನಟಿಯ ಲುಕ್ ತುಂಬಾ ಆಕರ್ಷಕವಾಗಿತ್ತು. ಅವರ ಕಂಪ್ಲೀಟ್ ಲುಕ್ ನೋಡಿದ ಜನ ನಿಮಗೆ ವಯಸ್ಸೇ ಆಗಲ್ವಾ ಎಂದು ಕೇಳಿದ್ದಾರೆ.
Poll (Public Option)

Post a comment
Log in to write reviews