ಇಸ್ರೇಲ್‌ಗೆ ನೆರವು ನೀಡಿದರೆ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ: ಮಿತ್ರರಾಷ್ಟ್ರಗಳಿಗೆ ಇರಾನ್ ಎಚ್ಚರಿಕೆ

ನವದೆಹಲಿ: ಇಸ್ರೇಲ್‌ಗೆ ನೆರವು ನೀಡಿದರೆ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ತನ್ನ ತೈಲ-ಶ್ರೀಮಂತ ಮಿತ್ರರಾಷ್ಟ್ರಗಳಿಗೆ ಇರಾನ್ ಎಚ್ಚರಿಕೆ ನೀಡಿದೆ.
ಇರಾನ್ ತನ್ನ ಅರಬ್ ನೆರೆಹೊರೆ ರಾಷ್ಟ್ರಗಳು ಮತ್ತು ಗಲ್ಫ್ ನಲ್ಲಿರುವ ಅಮೆರಿಕ ಮಿತ್ರರಾಷ್ಟ್ರಗಳಿಗೆ ಕಟುವಾದ ಎಚ್ಚರಿಕೆಯನ್ನು ನೀಡಿದ್ದು, ಇರಾನ್ ಮೇಲಿನ ಯಾವುದೇ ಸಂಭಾವ್ಯ ದಾಳಿನಲ್ಲಿ ಇಸ್ರೇಲ್ ಗೆ ಮಾಡಲು ತಮ್ಮ ಪ್ರದೇಶಗಳು ಅಥವಾ ವಾಯುಪ್ರದೇಶವನ್ನು ಬಳಸಲು ಅನುವು ಮಾಡಿಕೊಟ್ಟರೆ ತೀವ್ರ ಪ್ರತೀಕಾರ ಎದುರಿಸಬೇಕಾಗುತ್ತದೆ ಎಂದು ಬೆದರಿಕೆ ಹಾಕಿದೆ ಎಂದು ವಾಲ್ ಸ್ಟ್ರೀಟ್ ರ‍್ನಲ್ ವರದಿ ಮಾಡಿದೆ.
ಸೌದಿ ಅರೇಬಿಯಾ, ಯುನೈಟೆಡ್ ಅರಬ್ ಎಮಿರೇಟ್ಸ್, ಜರ‍್ಡಾನ್ ಮತ್ತು ಕತಾರ್ ನಂತಹ ತೈಲ-ಸಮೃದ್ಧ ರಾಷ್ಟ್ರಗಳನ್ನು ಗುರಿಯಾಗಿಟ್ಟುಕೊಂಡು ರಹಸ್ಯ ರಾಜತಾಂತ್ರಿಕ ಮರ‍್ಗಗಳ ಮೂಲಕ ಎಚ್ಚರಿಕೆಯನ್ನು ರವಾನಿಸಲಾಗಿದೆ. ಇವೆಲ್ಲವೂ ಅಮೆರಿಕ ಸೇನಾ ಪಡೆಗಳ ಆತಿಥ್ಯ ವಹಿಸುತ್ತವೆ. ಅಮೆರಿಕ ಸೇನಾ ಪಡೆಗಳು ಈ ದೇಶಗಳಲ್ಲಿ ಸೇನಾ ಘಟಕಗಳನ್ನು ಹೊಂದಿದೆ. ಇದೇ ದೇಶಗಳ ಮೂಲಕ ಇಸ್ರೇಲ್ ಗೆ ಸೇನಾ ನೆರವು ಹರಿಯುತ್ತಿದೆ ಎಂದು ಇರಾನ್ ಆರೋಪಿಸಿದೆ.
ಈ ತಿಂಗಳ ಆರಂಭದಲ್ಲಿ ಇಸ್ರೇಲ್ ಅನ್ನು ಗುರಿಯಾಗಿಸಿ ಇರಾನ್ ಬ್ಯಾಲಿಸ್ಟಿಕ್ ಕ್ಷಿಪಣಿ ದಾಳಿ ನಡೆಸಿತ್ತು. ಇದರ ಬೆನ್ನಲ್ಲೇ ಇಸ್ರೇಲ್ ಟೆಹ್ರಾನ್ ವಿರುದ್ಧ ಕಠಿಣ ಪ್ರತೀಕಾರ ತೀರಿಸಿಕೊಳ್ಳುವುದಾಗಿ ಪ್ರತಿಜ್ಞೆ ಮಾಡಿತ್ತು. ಈ ದಾಳಿಯಿಂದ ಕೆರಳಿದ ಇಸ್ರೇಲಿ ಅಧಿಕಾರಿಗಳು ಇರಾನ್ ನ ಪರಮಾಣು ಅಥವಾ ತೈಲ ಮೂಲಸೌರ‍್ಯದ ಮೇಲೆ ಪ್ರತೀಕಾರದ ದಾಳಿಗಳನ್ನು ನಡೆಸುವ ಎಚ್ಚರಿಕೆ ನೀಡಿತ್ತು. ಈ ಎಚ್ಚರಿಕೆ ಬೆನ್ನಲ್ಲೇ ಎಚ್ಚೆತ್ತುಕೊಂಡಿರುವ ಇರಾನ್ ಇಸ್ರೇಲ್ ನ ನಾಗರಿಕ ಮೂಲಸೌರ‍್ಯ ಮತ್ತು ಇಸ್ರೇಲಿ ಅಥವಾ ಅಮೆರಿಕ ನೇತೃತ್ವದ ದಾಳಿಗೆ ಅನುಕೂಲವಾಗುವಂತಹ ಅರಬ್ ರಾಷ್ಟ್ರಗಳಿಗೆ ಬೆದರಿಕೆ ಹಾಕುವ ಮೂಲಕ ಇರಾನ್ ನನ್ನು ಹಿಮ್ಮೆಟ್ಟಿಸಲು ಪ್ರತಿಜ್ಞೆ ಮಾಡಿದೆ.
Poll (Public Option)

Post a comment
Log in to write reviews