ಬೆಂಳೂರಿನಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುಧ್ಧ ಮಹಾನಗರದ ಬಿಜೆಪಿ ಘಟಕದಿಂದ ಇಂದು ಪ್ರತಿಭಟನೆ ನಡೆಸುತ್ತಿದೆ. ಪ್ರತಿಪಕ್ಷದ ನಾಯಕ ಆರ್ ಅಶೋಕ್ ನೇತೃತ್ವದಲ್ಲಿ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಇಂದು ಬಿಜೆಪಿ ನಾಯಕರು ಪ್ರತಿಭಟನೆ ನಡೆಸುತ್ತಿದ್ದಾರೆ. ರಾಜ್ಯ ಸರ್ಕಾರದ ದುರಾಡಳಿತ ಕಾನೂನು ಸುವ್ಯವಸ್ಥೆ ಹದಗೆಟ್ಟಿರುವ ಬಗ್ಗೆ ಬಿಜೆಪಿ ನಾಯಕರು ಕಿಡಿಕಾರಿದ್ದಾರೆ. ಕಾಂಗ್ರೆಸ್ ಸರ್ಕಾರ ಬಂದ ನಂತರ ರಾಜ್ಯದಲ್ಲಿ ಕೊಲೆ, ದೊಂಬಿ, ಅತ್ಯಚಾರ, ಹೆಚ್ಚಾಗುತ್ತಿದೆ. ಪೊಲೀಸ್ ಇಲಾಖೆ ಸರ್ಕಾರದ ಮಾತು ಕೇಳುತ್ತಿಲ್ಲ ಎಂದು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
ಒಂದು ವಷ೯ದಲ್ಲಿ ಅಭಿವೃದ್ದಿಯ ಕಡೆಗೆ ಕಾಂಗ್ರೆಸ್ ಸರ್ಕಾರ ಗಮನ ಹರಿಸದೆ ನಿರ್ಲಕ್ಷ್ಯ ಮಾಡಿದೆ, ಸಿಎಂ ಸಿದ್ದರಾಮಯ್ಯ ಸಿಟಿ ರೌಂಡ್ಸ್ ತೋರಿಕೆಗೆ ಮಾತ್ರ ಮಹಾನಗರಕ್ಕೆ ಬಜೆಟ್‌ನಲ್ಲಿ ಕವಡೆ ಕಾಸು ಮೀಸಲು ಇಟ್ಟಿಲ್ಲ ಎಂದು ಬಿಜೆಪಿ ನಾಯಕರು ಕಿಡಿಕಾರಿದ್ದಾರೆ.
ಗ್ಯಾರಂಟಿ ಹಿಂದೆ ಬಿದ್ದ ಸರ್ಕಾರ ಇತರೆ ಅಭಿವೃದ್ದಿ ಕಾಯ೯ಗಳನ್ನು ಕಡೆಗಣಿಸಿದ್ದಾರೆ. ಆ ಕ್ಷೇತ್ರದ ಅಭಿವೃದ್ದಿಗೆ ಶಾಸಕರಿಗೆ ಅನುದಾನ ನೀಡುತ್ತಿಲ್ಲ ಇದರಿಂದ ಜನ ಸರ್ಕಾರದ ವಿರುದ್ಧ ಬೇಸರಗೊಂಡಿದ್ದಾರೆ ಎಂದು ಶಾಸಕ ಭೈರತಿ ಬಸವರಾಜ್ ಹೇಳಿದ್ದಾರೆ.
ಬೊಮ್ಮಾಯಿ ಆಡಳಿತದಲ್ಲಿ ಎಲ್ಲ ಪಕ್ಷದ ಶಾಸಕರಿಗೆ ಅನುದಾನ ಬಿಡುಗಡೆ ಮಾಡಲಾಗಿತ್ತು ಕಾಂಗ್ರೆಸ್ ಸರ್ಕಾರ ಮಲತಾಯಿ ಧೋರಣೆ ತೋರುತ್ತಿದೆ. ರಸ್ತೆ ಗುಂಡಿ ಮುಚ್ಚಲು ಸರ್ಕಾರದ ಬಳಿ ಹಣವಿಲ್ಲ ಗುತ್ತಿಗೆದಾರರಿಂದ 25% ಕಮಿಷನ್ ಪಡೆಯುತ್ತ ಬೆಂಗಳೂರನ್ನ ಕಾಂಗ್ರೆಸ್ ATM ಮಾಡಿಕೊಂಡಿದೆ ಕೇಂದ್ರ ಸರ್ಕಾರದ 5KG ಅಕ್ಕಿ ಹೊರತು ಪಡಿಸಿ ರಾಜ್ಯ ಸರ್ಕಾರ ತನ್ನ ಪಾಲಿನ ಅಕ್ಕಿಯನ್ನು ಕೊಡದೆ ಜನರನ್ನು ವಂಚಿಸಿದೆ ಎಂದು ಬಿಜೆಪಿ ನಾಯಕರು ಕಾಂಗ್ರೆಸ್ ವಿರುದ್ಧ ಕಿಡಿಕಾರಿದ್ದಾರೆ. ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆ, ಹಾಲಿನ ದರದ ಹೆಚ್ಚಳ, ಹಾಗೂ ಪಾಲಿಕೆ ವ್ಯಾಪ್ತಿಯ ಆಸ್ಪತ್ರೆಗಳಲ್ಲಿ ಔಷಧ ಕೂಡ ಸಿಗುತ್ತಿಲ್ಲ. ಬಡವರ ಕಣ್ಣಲ್ಲಿ ನೀರಲ್ಲ, ರಕ್ತ ಬರುತ್ತಿದೆ ಎಂದು ಬಿಜೆಪಿ ಶಾಸಕ ಗೋಪಾಲಯ್ಯ ಹೇಳಿದ್ದಾರೆ. ಇದು ಅತ್ಯಂತ ಭ್ರಷ್ಟ ಸರ್ಕಾರ ಆಗಿದ್ದು ನಗರದಲ್ಲಿ ಕಸ ವಿಲೇವಾರಿ ಕೂಡ ಸಮಪ೯ಕವಾಗಿ ಮಾಡದೆ ರೋಗ ರುಜೀನುಗಳು ಹೆಚ್ಚಾಗಿದೆ. ಬೆಂಗಳೂರು ನಗರಕ್ಕೆ ಹಣ ಕೊಟ್ಟರೆ DK ಶಿವಕುಮಾರ್ ಗಟ್ಟಿಯಾಗುತ್ತಾರೆ ಅಂತ ಸಿದ್ದರಾಮಯ್ಯ ಹಣ ಬಿಡುಗಡೆ ಮಾಡುತ್ತಿಲ್ಲ ಎಂದ ಅಶ್ವತ್ ನಾರಾಯಣ್ D K ಶಿವಕುಮಾರ್ ಅವರ ಮೇಲೆ ಸಿಟ್ಟಿದ್ದರೆ ಅವರ ಮೇಲೆ ತೀರಿಸಿಕೊಳ್ಳಿ, ಜನರಿಗೆ ತೊಂದರೆ ಕೊಡಬೇಡಿ ಎಂದು ಅಬ್ಭರಿಸಿದರು. ಈ ಪ್ರತಿಭಟನೆಯಲ್ಲಿ ಆರ್.ಅಶೋಕ್, ಡಾ.ಸಿ.ಎನ್.ಅಶ್ವತ್ ನಾರಾಯಣ್, ಸಂಸದರಾದ ಡಿ.ವಿ. ಸದಾನಂದಗೌಡ, ಪಿ.ಸಿ.ಮೋಹನ್, ತೇಜಸ್ವಿ ಸೂರ್ಯ, ಶಾಸಕರುಗಳಾದ ಎಸ್.ಸುರೇಶ್‌ಕುಮಾರ್, ರವಿಸುಬ್ರಮಣ್ಯ, ಸಿ.ಕೆ. ರಾಮಮೂರ್ತಿ, ಉದಯ್ ಗರುಡಾಚಾರ್, ಸತೀಶ್ ರೆಡ್ಡಿ, ಕೆ.ಗೋಪಾಲಯ್ಯ, ಎಸ್.ಮುನಿರಾಜು ಅವರು ಭಾಗವಹಿಸಿದ್ದಾರೆ
Post a comment
Log in to write reviews