2024-09-19 04:37:39

News broadcasting is the medium of broadcasting various news events and other information via television, radio, or the internet in the field of broadcast journalism.

Get In Touch

  • info@samayanews.tv
  • 8050000444
  • Samaya News, 48, 2nd Floor, 2nd Main, 2nd Cross, Ganganagar, Muthappa Block, RT Nagar, Bengaluru, Karnataka 560032

ಭೀಮ’ ಯಶಸ್ಸಿನ ಬೆನ್ನಲ್ಲೆ ತಮಿಳು ಸಿನಿಮಾದಿಂದ ದುನಿಯಾ ವಿಜಿಗೆ ಕರೆ

ದುನಿಯ ವಿಜಿಯ್‌ ನಟಿಸಿ ನಿರ್ದೇಶಿನ ಮಾಡಿರುವ  ಭೀಮ ಚಿತ್ರ  ಇತ್ತೀಚೆಗೆ ಬಿಡುಗಡೆ ಆಗಿ ಉತ್ತಮ ಪ್ರೇಕ್ಷಕರ ಮನಸ್ಸು ಗೆದ್ದಿದೆ. ಮತ್ತು ಜನರಿಂದ ಒಳ್ಳೆಯ ಪ್ರತಿಕ್ರಿಯೇ ದೊರೆತಿದೆ. ಸಲಗ ಬಳಿಕೆ ದುನಿಯ ವಿಜಯ್‌ ನಿರ್ದೇಶನ ಮಾಡಿರುವ ಎರಡನೇ ಸಿನಿಮಾ ಇದಾಗಿದೆ.

ಸಿನಿಮಾ ಬಿಡುಗಡೆ ಆದ ಕೆಲವೇ ದಿನಗಳಿಗೆ ಚಿತ್ರಮಂದಿರದಲ್ಲಿ 15 ಕೋಟಿ ಗಳಿಕೆ ಮಾಡಿದೆ ಎಂಬ ಸುದ್ದಿ ಹರಿದಾಡುತ್ತಿದೆ. ಚಿತ್ರತಂಡ ಈಗಾಗಲೇ ಸಿನಿಮಾದ ಸಕ್ಸಸ್ ಮೀಟ್ ಆಯೋಜಿಸಿದ್ದಾಗಿದೆ. ದುನಿಯಾ ವಿಜಯ್ ಅಂತೂ ಸತತ ಎರಡನೇ ಬಾರಿಗೆ ನಿರ್ದೇಶನದಲ್ಲಿ ಗೆದ್ದಿದ್ದಾರೆ. ಇದೆಲ್ಲದರ ನಡುವೆ ದುನಿಯಾ ವಿಜಯ್​ಗೆ ತಮಿಳು ಚಿತ್ರರಂಗದಿಂದ  ಕರೆ ಬಂದಿದೆ ಎನ್ನಲಾಗುತ್ತಿದೆ. ಅಸಲಿಗೆ ‘ಭೀಮ’ ಸಿನಿಮಾಕ್ಕೆ ಮುಂಚೆಯೇ ಈ ಕೆರ ಬಂದಿತ್ತು

ಭೀಮ’ ಸಿನಿಮಾಕ್ಕೆ ಸಂಬಂಧಿಸಿದ ಸಂದರ್ಶನವೊಂದರಲ್ಲಿ ಮಾತನಾಡಿರುವ ದುನಿಯಾ ವಿಜಯ್​, ‘ತಮಿಳಿನಿಂದ ಒಂದು ಆಫರ್ ಬರುವ ಮುನ್ಸೂಚನೆ ಇದೆ. ಲೋಕೇಶ್ ಕನಗರಾಜ್ ಸಿನಿಮಾ ಒಂದರ ಪಾತ್ರಕ್ಕಾಗಿ ನನ್ನ ಬಗ್ಗೆ ಆಲೋಚಿಸಿದ್ದಾರೆ ಎಂಬ ಸುದ್ದಿ ನನ್ನ ವರೆಗೂ ಬಂದಿದೆ. ಚೆನ್ನೈನವರೇ ಹೀಗೆ ಮಾತೊಂದನ್ನು ನನಗೆ ಹೇಳಿದ್ದಾರೆ. ಆದರೆ ನನಗೆ ಲೋಕೇಶ್ ಕನಗರಾಜ್ ಅಧಿಕೃತವಾಗಿ ಏನನ್ನೂ ಹೇಳಿಲ್ಲ. ಮುಂದೆ ನೋಡೋಣ ಏನಾಗುತ್ತದೆಯೋ’ ಎಂದಿದ್ದಾರೆ. ಲೋಕೇಶ್ ಕನಗರಾಜ್ ನನ್ನ ಬಹಳ ಮೆಚ್ಚಿನ ನಿರ್ದೇಶಕ. ಅವರ ಮುಂದಿನ ಸಿನಿಮಾದಲ್ಲಿ ನನಗೊಂದು ಪಾತ್ರ ನೀಡುವ ಬಗ್ಗೆ ಅಂದುಕೊಂಡಿದ್ದಾರಂತೆ. ಒಂದೊಮ್ಮೆ ನನ್ನನ್ನು ನಟಿಸಲು ಕರೆದರೆ ಕಂಡಿತ ನಿರಾಕರಣೆ ಮಾಡುವುದಿಲ್ಲ. ಖಂಡಿತ ನಟಿಸುತ್ತೇನೆ. ನನಗೆ ಬಹಳ ಇಷ್ಟದ ನಿರ್ದೇಶಕ ಅವರು’ ಎಂದಿದ್ದಾರೆ. ಅಂದಹಾಗೆ ಲೊಕೇಶ್ ಕನಗರಾಜ್ ಇದೀಗ ರಜನೀಕಾಂತ್ ನಟನೆಯ ‘ಕೂಲಿ’ ಸಿನಿಮಾ ನಿರ್ದೇಶನ ಮಾಡುತ್ತಿದ್ದಾರೆ. ಅದರ ಬಳಿಕ ‘ವಿಕ್ರಂ 2’, ‘ಖೈದಿ 2’ ಸಿನಿಮಾಗಳನ್ನು ನಿರ್ದೇಶನ ಮಾಡಲಿದ್ದಾರೆ. ಇವುಗಳಲ್ಲಿ ದುನಿಯಾ ವಿಜಯ್ ಯಾವ ಸಿನಿಮಾದಲ್ಲಿ ನಟಿಸಲಿದ್ದಾರೆ ಕಾದು ನೋಡಬೇಕಿದೆ.

ಇನ್ನು ದುನಿಯಾ ವಿಜಯ್​ಗೆ ಪರಭಾಷೆ ಸಿನಿಮಾಗಳಲ್ಲಿ ನಟಿಸುವುದು ಹೊಸತೇನೂ ಅಲ್ಲ. ಈ ಹಿಂದೆ ನಂದಮೂರಿ ಬಾಲಕೃಷ್ಣ ನಟಿಸಿರುವ ‘ವೀರ ಸಿಂಹ ರೆಡ್ಡಿ’ ಸಿನಿಮಾದಲ್ಲಿ ನಟಿಸಿದ್ದರು. ಈ ಸಿನಿಮಾದ ಮುಖ್ಯ ವಿಲನ್ ಪಾತ್ರದಲ್ಲಿ ದುನಿಯಾ ವಿಜಿ ನಟಿಸಿದ್ದರು. ಸ್ವತಃ ಬಾಲಕೃಷ್ಣ, ದುನಿಯಾ ವಿಜಯ್ ನಟನೆಗೆ ಭೇಷ್ ಎಂದಿದ್ದರು. ಇದೀಗ ತಮಿಳಿನಿಂದಲೂ ಕರೆ ಬರುವ ಸಾಧ್ಯತೆ ಇದ್ದು, ವಿಜಿ ಅದನ್ನು ಹೇಗೆ ಬಳಸಿಕೊಳ್ಳಲಿದ್ದಾರೆ ಕಾದು ನೋಡಬೇಕಿದೆ.

 

 

Post a comment

No Reviews