2024-12-24 06:15:19

News broadcasting is the medium of broadcasting various news events and other information via television, radio, or the internet in the field of broadcast journalism.

Get In Touch

  • info@samayanews.tv
  • 8050000444
  • Samaya News, 48, 2nd Floor, 2nd Main, 2nd Cross, Ganganagar, Muthappa Block, RT Nagar, Bengaluru, Karnataka 560032

ಪರ್ಕಳ ಪರಿಸರದಲ್ಲಿ ಮತ್ತೆ ಆಫ್ರಿಕನ್ ಮಾದರಿಯ ಬಸವನ ಹುಳು ಪತ್ತೆ

ಉಡುಪಿ : ಜಿಲ್ಲೆಯ ಪರ್ಕಳ ಪರಿಸರದಲ್ಲಿ ಮತ್ತೆ ಆಫ್ರಿಕನ್ ಮಾದರಿಯ ಬಸವನ ಹುಳು ಕಾಣಿಸಿಕೊಳ್ಳುತ್ತಿವೆ. ದೇವಿ ನಗರದ ಸುತ್ತಮುತ್ತ ಪರಿಸರದಲ್ಲಿ ಆಫ್ರಿಕನ್ ಮಾದರಿಯ ಬಸವನ ಹುಳು ಯಥೇಚ್ಛವಾಗಿ  ಗೋಡೆಗಳಲ್ಲಿ ಹರಿಯಲಾರಂಭಿಸಿದೆ.

ಮನೆಗಳ ಕಾಂಪೌಂಡ್ವಾಲ್​ಗಳ ಮೇಳೆ ಆಫ್ರಿಕನ್‌ ಮಾದರಿಯ ಬಸವನ ಹುಳು ನಡೆದಾಡುತ್ತಿವೆ. ರಾತ್ರಿ ಹೊತ್ತಿನಲ್ಲಿ ಇದರ ಸಂಚಾರ ಹೆಚ್ಚಾಗಿದ್ದು. ಪಪ್ಪಾಯಿಗಿಡ, ಇನ್ನಿತರ ಹೂವಿನ ಗಿಡ, ಕ್ರೋಟನ್ ಗಿಡಗಳ ಎಲೆಗಳನ್ನು ತಿಂದು ಹಾಕುತ್ತಿವೆ. ಇದರಿಂದ ಹೊರ ಸೂಸುವ ದ್ರವ್ಯ ವಾಸನೆಯಿಂದ ಕೂಡಿರುತ್ತದೆ. ಸ್ವಚ್ಛತೆ ಮಾಡಿದರೂ ಈ ಭಾಗದಲ್ಲಿ ಮತ್ತೆ ಮತ್ತೆ ಈ ಬಸವನ ಹುಳು ಕಾಟ ಆರಂಭವಾಗಿದೆ.

ಸೂಕ್ತ ಕ್ರಮಕ್ಕೆ ಸ್ಥಳೀಯರಿಂದ ಆಗ್ರಹ : ಉಡುಪಿ ಪ್ರದೇಶದಲ್ಲಿ ನಗರ ಸಭೆಯವರು ಸೂಕ್ತವಾದ ಮದ್ದನ್ನ ಸಿಂಪಡಿಸಿ ಇದಕ್ಕೆ ಮುಕ್ತಿ ಹಾಡಬೇಕು ಎಂದು ಜನರು ಒತ್ತಾಯಿಸಿದ್ದಾರೆ. ಉಡುಪಿ ನಗರಸಭೆ ಮತ್ತು ಸ್ವಲ್ಪ ಭಾಗ 80 ಬಡಗುಬೆಟ್ಟು ಪಂಚಾಯಿತಿಗೆ ಒಳಪಟ್ಟಿರುವುದರಿಂದ ಔಷಧ ಸಿಂಪಡಿಸಲು ಹಿಂದೇಟು ಹಾಕುತ್ತಿದ್ದಾರೆ. ಈ ಹುಳುಬಾದೆಗೆ ಪೂರ್ಣ ವಿರಾಮ ಹಾಕಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.

Post a comment

No Reviews