ಜೋ ಬೈಡನ್ ಅವರ ಆರೋಗ್ಯದಲ್ಲಿ ಎರುಪೇರು ಆದ ಕಾರಣ ವರ್ಷ ನಡೆಯಲಿರುವ ಅಧ್ಯಕ್ಷೀಯ ಚುನಾವಣೆಯಲ್ಲಿ ಸ್ಫರ್ಧಿಸುವುದು ಅನುಮಾನ

ಅಮೆರಿಕ: ಅಧ್ಯಕ್ಷ ಜೋ ಬೈಡನ್ ಇದೇ ವರ್ಷ ನಡೆಯಲಿರುವ ಅಧ್ಯಕ್ಷೀಯ ಚುನಾವಣೆಯಲ್ಲಿ ಸ್ಫರ್ಧಿಸಲು ಸಿದ್ಧರಾಗಿದ್ದಾರೆ. ಆದರೆ ಅವರ ಆರೋಗ್ಯ ಹದಗೆಡುತ್ತಿದೆ. ಜತೆಗೆ ಟ್ರಂಪ್ನಿಂದ ಎದುರಿಸುತ್ತಿರುವ ಕಠಿಣ ಸವಾಲಿನಿಂದಾಗಿ ಅನೇಕ ಡೆಮಾಕ್ರೆಟಿಕ್ ನಾಯಕರು ಅವರನ್ನು ಚುನಾವಣಾ ಕಣದಿಂದ ಹೊರಗಿಡುವಂತೆ ಸೂಚಿಸಿದ್ದಾರೆ.
ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮೇಲಿನ ಹಲ್ಲೆ ನಂತರ ಬೈಡನ್ ಆಡಳಿತದ ಸಮಸ್ಯೆಗಳು ಇನ್ನಷ್ಟು ಹೆಚ್ಚಾಗಲಿದೆ. ಟ್ರಂಪ್ಗೆ ದೇಶದ ಬೆಂಬಲ ಹಾಗೂ ಸಹಾನುಭೂತಿ ಸಿಗುತ್ತಿದೆ. ವರದಿಗಳ ಪ್ರಕಾರ, ನವೆಂಬರ್ನಲ್ಲಿ ನಡೆಯಲಿರುವ ಚುನಾವಣೆಯಲ್ಲಿ ಗೆಲ್ಲಲು ಸಾಧ್ಯವಿಲ್ಲ ಎಂದು ಬೈಡನ್ ಭಾವಿಸಿದ್ದಾರೆ. ಈ ಪರಿಸ್ಥಿತಿಯಲ್ಲಿ ಪಕ್ಷದ ಅನೇಕರ ಒತ್ತಡಕ್ಕೆ ಮಣಿದು ರೇಸ್ನಿಂದ ಹೊರಗುಳಿಯಬೇಕಾಗಬಹುದು. 81 ವರ್ಷದ ಜೋ ಬೈಡನ್ಗೆ ಮರೆವಿನ ಕಾಯಿಲೆ ಇದ್ದು ಈಗ ಕೊರೊನಾ ಸೋಂಕಿನಿಂದ ಬಳಲುತ್ತಿದ್ದಾರೆ.
ಮಾಜಿ ಅಧ್ಯಕ್ಷ ಬರಾಕ್ ಒಬಾಮಾ, ಮಾಜಿ ಸ್ಪೀಕರ್ ನ್ಯಾನ್ಸಿ ಪೆಲೋಸಿ ಮತ್ತು ಚಕ್ ಶುಮರ್ ಸೇರಿದಂತೆ ಡೆಮಾಕ್ರಟಿಕ್ ಪಕ್ಷದ ಉನ್ನತ ನಾಯಕರು ಬೈಡನ್ ಅವರನ್ನು ಅಧ್ಯಕ್ಷೀಯ ಸ್ಪರ್ಧೆಯಿಂದ ಹಿಂದೆ ಸರಿಯುವಂತೆ ಕೇಳಿಕೊಂಡಿದ್ದಾರೆ.
Poll (Public Option)

Post a comment
Log in to write reviews