ಕಲಬುರಗಿ: ಕೆಎಎಸ್ ಪರೀಕ್ಷೆಗಳಲ್ಲಿ ಒಂದಿಲ್ಲ ಒಂದು ಬಗೆಯ ಅಕ್ರಮ ಅವ್ಯವಹಾರ ನಡೆಯುವ ಹಿನ್ನೆಲೆಯಲ್ಲಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಹೆಚ್ಚುವರಿ ಕಟ್ಟುನಿಟ್ಟಿನ ಕ್ರಮಗಳನ್ನು ತೆಗೆದುಕೊಂಡಿದ್ದು, ರಾಜ್ಯ ಸರ್ಕಾರವು ಕೆಎಎಸ್ ಗೆಜಿಟೆಡ್ ಪ್ರೊಬೇಷನರ್ಸ್ ಪೂರ್ವಭಾವಿ ಪರೀಕ್ಷೆಗಳನ್ನು ಇಂದು ರಾಜ್ಯದ ಹಲವಾರು ಕೇಂದ್ರಗಳಲ್ಲಿ ನಡೆಸುತ್ತಿದೆ.
ಮುಸ್ಲಿಂ ಯುವತಿಯರು ಹಿಜಾಬ್ ಧರಿಸಿ ಪರೀಕ್ಷಾ ಕೇಂದ್ರ ಪ್ರವೇಶಿಸುವಂತಿಲ್ಲ. ಕಲಬುರಗಿಯ ಪರೀಕ್ಷಾ ಕೇಂದ್ರವೊಂದರ ಬಳಿ ಕೆಈಎ ಅಧಿಕಾರಿಗಳು ಮತ್ತು ಪೊಲೀಸರು ಪರೀಕ್ಷಾರ್ಥಿ ಯುವತಿಯರ ಮೂಗುತಿ ಮತ್ತು ಕಿವಿಯೋಲೆಗಳನ್ನು ಸಹ ಬಿಚ್ಚುತ್ತಿರುವುದು ಅಥವಾ ಬಿಚ್ಚಿಸುತ್ತಿರುವುದನ್ನು ನೋಡಬಹುದು. ಮೂಗುತಿ ಮತ್ತು ಈಯರ್ ರಿಂಗ್ ಗಳನ್ನು ಬಿಚ್ಚುವ ಹೊಸ ವಿಧಾನವನ್ನು ಅಧಿಕಾರಿಗಳು ಅವಿಷ್ಕಾರ ಮಾಡಿದಂತಿದೆ. ಕತ್ತರಿಯನ್ನು ಉಪಯೋಗಿಸಿ ಅವುಗಳನ್ನು ಬಿಚ್ಚುತ್ತಾರೆಯೇ? ಪ್ರಾಯಶಃ ಕನ್ನಡಿಗರು ಈ ವಿಧಾನವನ್ನು ಮೊದಲ ಬಾರಿಗೆ ನೋಡುತ್ತಿರಬಹುದು. ಏನಾದರರೂ ಇರಲಿ, ಹೇಗಾದರೂ ಇರಲಿ ಪರೀಕ್ಷೆಗಳು ಅಕ್ರಮಗಳಿಲ್ಲದೆ ನಡೆದರೆ ಸಾಕು.
Post a comment
Log in to write reviews