2024-12-24 07:15:01

News broadcasting is the medium of broadcasting various news events and other information via television, radio, or the internet in the field of broadcast journalism.

Get In Touch

  • info@samayanews.tv
  • 8050000444
  • Samaya News, 48, 2nd Floor, 2nd Main, 2nd Cross, Ganganagar, Muthappa Block, RT Nagar, Bengaluru, Karnataka 560032

ಯುವ ಪತ್ನಿ ಶ್ರೀದೇವಿ ವಿರುದ್ಧ ಮಾನಹಾನಿ ಕೇಸ್ ದಾಖಲಿಸಲಿರುವ ನಟಿ ಸಪ್ತಮಿ ಗೌಡ!

ಡಾ.ರಾಜ್‌ಕುಮಾರ್‌ ವಂಶದ ಕುಡಿ, ನಟ ರಾಘವೇಂದ್ರ ರಾಜ್ ಕುಮಾರ್ ಮಗ ಯುವ ರಾಜ್‌ಕುಮಾರ್‌ ಅವರು ಪತ್ನಿ ಶ್ರೀದೇವಿ ಭೈರಪ್ಪ ಅವರಿಗೆ ಡಿವೋರ್ಸ್ ನೋಟಿಸ್‌ ನೀಡಿದ ಬಳಿಕ ಇಬ್ಬರ ನಡುವಿನ ಆರೋಪ- ಪ್ರತ್ಯಾರೋಪಗಳು ಹೆಚ್ಚಾಗಿವೆ ಅದರಲ್ಲೂ, ಅನೈತಿಕ ಸಂಬಂಧಗಳ ಆರೋಪಗಳು ಕೇಳಿ ಬಂದಿದ್ದು ಶ್ರೀದೇವಿ ಭೈರಪ್ಪ ಅವರು ರಾಧಯ್ಯ ಎಂಬ ವ್ಯಕ್ತಿ ಜತೆ ಅನೈತಿಕ ಸಂಬಂಧ ಹೊಂದಿದ್ದಾರೆ ಎಂಬುದಾಗಿ ಯುವ ರಾಜ್‌ಕುಮಾರ್‌ ಪರ ವಕೀಲ ಸಿರಿಲ್‌ ಪ್ರಸಾದ್‌ ಆರೋಪಿಸಿದರೆ ಇನ್ನು, ನಟನ ಲೀಗಲ್‌ ನೋಟಿಸ್‌ಗೆ ಪತ್ನಿ ಶ್ರೀದೇವಿ ಭೈರಪ್ಪ ಯುವ ರಾಜ್‌ಕುಮಾರ್‌ ಪ್ರಖ್ಯಾತ ನಟಿ ಸಪ್ತಮಿ ಗೌಡ ಜತೆ ಡೇಟಿಂಗ್ ಮಾಡುತ್ತಿದ್ದಾರೆ ಎಂಬುದಾಗಿ ಆರೋಪಿಸಿದ್ದಾರೆ. ಆ ಮೂಲಕ ಡಿವೋರ್ಸ್‌ ಪ್ರಕರಣವೀಗ ಪರಸ್ಪರ ಕೆಸರೆರಚಾಟಕ್ಕೆ ಕಾರಣವಾಗಿದೆ.

ಯುವ ಸಿನಿಮಾದಲ್ಲಿ ಒಟ್ಟಿಗೆ ನಟಿಸುವಾಗಳಿಂದ ಯುವ ರಾಜ್‌ಕುಮಾರ್‌ ಸಪ್ತಮಿ ಗೌಡ ಹಿಂದೆ ಬಿದ್ದಿದ್ದಾರೆ. ಸಪ್ತಮಿಯನ್ನು ಬಹಳಷ್ಟು ಸಲ ಮನೆಗೆ ಕರೆದುಕೊಂಡು ಬರುತ್ತಿದ್ದರು. ಸಪ್ತಮಿ ಗೌಡ ಜತೆ ಹೋಟೆಲ್‌ನಲ್ಲಿ ಇರುವಾಗಲೇ ಯುವ ಸಿಕ್ಕಿಬಿದ್ದಿದ್ದರು. ಸಂಬಂಧ ಗೊತ್ತಾದ ಮೇಲೆ ನನ್ನ ಮೇಲೆ ಆರೋಪ ಮಾಡಲು ಶುರುವಿಟ್ಟುಕೊಂಡರು ಎಂಬುದಾಗಿ ಶ್ರೀದೇವಿ ಆರೋಪಿಸಿದ್ದರು. ಆದರೆ ಯುವ ರಾಜ್‌ಕುಮಾರ್‌ ಖಾಸಗಿ ವಿಷಯಕ್ಕಾಗಿ ನಟಿ ಸಪ್ತಮಿ ಗೌಡ ಅವರ ಹೆಸರನ್ನು ಬಳಸಿಕೊಂಡ ಹಿನ್ನಲೆಯಲ್ಲಿ ಶ್ರೀದೇವಿ ವಿರುದ್ಧ ಕಾನೂನು ಹೋರಾಟಕ್ಕೆ ಸಪ್ತಮಿ ಗೌಡ ಕುಟುಂಬ ನಿರ್ಧರಿಸಿದೆ. ಹೀಗಾಗಿ ಶ್ರೀದೇವಿ ವಿರುದ್ಧ ಮಾನಹಾನಿ ಕೇಸ್ ದಾಖಲಿಸುವ ಬಗ್ಗೆ ಸಪ್ತಮಿ ಗೌಡ ಕುಟುಂಬಸ್ಥರು ನಿರ್ಧರಿಸಿದ್ದಾರೆ ಎನ್ನಲಾಗಿದೆ. 

Post a comment

No Reviews