
ನಟ ಯಶ್ ನಟಿಸಿದ್ದ ಸೂಪರ್ ಹಿಟ್ ‘ಕಿರಾತಕ’ ಸಿನಿಮಾದ ನಾಯಕಿ ಒವಿಯಾ ಕೆಲ ದಿನಗಳಿಂದಲೂ ಸಖತ್ ಸುದ್ದಿಯಲ್ಲಿದ್ದಾರೆ. ಸದ್ಯ ನಟಿ ಒವಿಯಾರದ್ದು ಎನ್ನಲಾದ ಖಾಸಗಿ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಜೋಡಿಯೊಂದು ಲೈಂಗಿಕ ಕ್ರಿಯೆಯಲ್ಲಿ ತೊಡಗಿರುವ ವಿಡಿಯೋದಲ್ಲಿರುವ ಯುವತಿ ನಟಿ ಒವಿಯಾ ಎನ್ನಲಾಗುತ್ತಿದೆ. ಒವಿಯಾ ಬಲಗೈ ಭುಜದ ಮೇಲಿರುವ ಟ್ಯಾಟೂ, ವಿಡಿಯೋದಲ್ಲಿರುವ ಯುವತಿಯ ಭುಜದ ಮೇಲೆಯೂ ಇದ್ದು, ನೆಟ್ಟಿಗರು, ‘ಇದು ಒವಿಯಾರದ್ದೇ ವಿಡಿಯೋ’ ಎನ್ನುತ್ತಿದ್ದಾರೆ. ಇದೀಗ ನಟಿ ಒವಿಯಾ ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಕೇರಳದ ತ್ರಿಶೂರ್ ಪೊಲೀಸ್ ಠಾಣೆಯಲ್ಲಿ ನಟಿ ಒವಿಯಾ ಈ ಬಗ್ಗೆ ದೂರು ದಾಖಲಿಸಿದ್ದಾರೆ ಎನ್ನಲಾಗುತ್ತಿದೆ. ಮಾಧ್ಯಮಗಳಿಗೆ ಹೇಳಿಕೆ ನೀಡಿರುವ ಒವಿಯಾರ ಮ್ಯಾನೇಜರ್, ‘ಒವಿಯಾರ ಘನತೆಗೆ ಧಕ್ಕೆ ತರುವ ಪ್ರಯತ್ನ ಇದಾಗಿದ್ದು, ಉದ್ದೇಶಪೂರ್ವಕವಾಗಿ ನಕಲಿ ವಿಡಿಯೋ ಅನ್ನು ಒವಿಯಾ ಹೆಸರಿನಲ್ಲಿ ವೈರಲ್ ಮಾಡಲಾಗಿದೆ’ ಎಂದಿದ್ದಾರೆ. ಈ ಬಗ್ಗೆ ತ್ರಿಶೂರು ಪೊಲೀಸ್ ಆಯುಕ್ತರಿಗೆ ದೂರು ನೀಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
Poll (Public Option)

Post a comment
Log in to write reviews