2024-09-19 04:52:23

News broadcasting is the medium of broadcasting various news events and other information via television, radio, or the internet in the field of broadcast journalism.

Get In Touch

  • info@samayanews.tv
  • 8050000444
  • Samaya News, 48, 2nd Floor, 2nd Main, 2nd Cross, Ganganagar, Muthappa Block, RT Nagar, Bengaluru, Karnataka 560032

ನಟಿ ಛಾಯಾ ಸಿಂಗ್ ಮನೆಯಲ್ಲಿ ಚಿನ್ನಾಭರಣ ಕಳುವು

ನಟಿ ಛಾಯಾ ಸಿಂಗ್‌ ತಾಯಿ ಮನೆಯಲ್ಲಿ ಚಿನ್ನಾಭರಣ ಕಳವು ಮಾಡಿದ್ದ ಕೆಲಸದಾಕೆಯನ್ನು ಬಸವೇಶ್ವರನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಎನ್‌ಜಿಒಎಸ್‌ ಕಾಲೋನಿ ನಿವಾಸಿ 43 ವರ್ಷದ ಉಷಾ ಬಂಧಿತ ಮಹಿಳೆ. ಆರೋಪಿಯಿಂದ 4 ಲಕ್ಷ ಮೌಲ್ಯದ 66 ಗ್ರಾಂ ಚಿನ್ನ ಮತ್ತು 115 ಗ್ರಾಂ ಬೆಳ್ಳಿ ಸಾಮಗ್ರಿ  ಜಪ್ತಿಮಾಡಲಾಗಿದೆ.

ಎನ್‌ಎಚ್ ಸಿಎಸ್‌ ಲೇಔಟ್ನಲ್ಲಿ ವಾಸವಾಗಿರುವ ಛಾಯಾಸಿಂಗ್‌ ತಾಯಿ ಚಮನ್‌ ಲತಾ ಸಿಂಗ್‌ ಮನೆಯಲ್ಲಿ ಅವರ ಮನೆಯಲ್ಲಿ 2 ವಷ೯ಗಳಿಂದ ಆರೋಪಿ ಕೆಲಸ ಮಾಡುತ್ತಿದ್ದಳು. ಈ ವೇಳೆ ಹಂತ -ಹಂತವಾಗಿ ಮನೆಯಲ್ಲಿದ್ದ ಚಿನ್ನಾಭರಣ ಕಳವು ಮಾಡಿದ್ದಳು ಎಂದು ಪೊಲೀಸರು ಹೇಳಿದ್ದಾರೆ. ಸಾಲ ತೀರಿಸುವ ಸಲುವಾಗಿ ಮಾಲೀಕರ ಮನೆಯಲ್ಲಿ ಆಭರಣ ಮತ್ತು ಹಣ ಕಳವು ಮಾಡಿದ್ದಾಗಿ ಆರೋಪಿ ತಪ್ಪೊಪ್ಪಿಕೊಂಡಿದ್ದಾಳೆ  ಎಂದು  ತಿಳಿದುಬಂದಿದೆ.

Post a comment

No Reviews