2024-12-24 06:10:19

News broadcasting is the medium of broadcasting various news events and other information via television, radio, or the internet in the field of broadcast journalism.

Get In Touch

  • info@samayanews.tv
  • 8050000444
  • Samaya News, 48, 2nd Floor, 2nd Main, 2nd Cross, Ganganagar, Muthappa Block, RT Nagar, Bengaluru, Karnataka 560032

26 ವರ್ಷಗಳ ಬಳಿಕ 'A' ರೀ ರಿಲೀಸ್: ಬದುಕು ಬದಲಿಸಿದ ಸಿನಿಮಾ ಎಂದ ನಟಿ ಚಾಂದಿನಿ

'A'. ಇದು ಕನ್ನಡ ಚಿತ್ರರಂಗದ ಬ್ಲಾಕ್​​ಬಸ್ಟರ್ ಸಿನಿಮಾ. ರಿಯಲ್​ ಸ್ಟಾರ್ ಉಪೇಂದ್ರ ನಾಯಕನಾಗಿ ನಟಿಸುವ ಜೊತೆಗೆ ಆ್ಯಕ್ಷನ್​​ ಕಟ್​ ಹೇಳಿದ್ದ ಈ ಸಿನಿಮಾದಲ್ಲಿ ನಾಯಕಿಯಾಗಿ ಚಾಂದಿನಿ ಅಭಿನಯಿಸಿದ್ದರು. ಮೇ 17ರಂದು 'A' ರೀ ರಿಲೀಸ್ ಆಗುತ್ತಿದೆ. ಈ ಸಂದರ್ಭದಲ್ಲಿ ಚಾಂದಿನಿ ಚಿತ್ರದ ಕೆಲವು ನೆನಪುಗಳನ್ನು ಮೆಲುಕು ಹಾಕಿದ್ದಾರೆ.

'ಎ' ಚಾಂದಿನಿ ಅವರ ಜೀವನವನ್ನೇ ಬದಲಿಸಿದ ವಿಶೇಷ ಸಿನಿಮಾ. ಇದು ಕನ್ನಡ ಚಿತ್ರರಂಗದ ಒಂದು ಮೈಲಿಗಲ್ಲು ಸಿನಿಮಾ ಎಂದರೂ ತಪ್ಪಾಗದು. ಈ ರೀತಿಯಲ್ಲೂ ಸಿನಿಮಾ ಮಾಡಬಹುದು ಎಂದು ಸಿನಿಮಾ ಜಗತ್ತಿಗೆ ತೋರಿಸಿಕೊಟ್ಟವರು ಉಪೇಂದ್ರ. A ಸಿನಿಮಾ ಆ ಕಾಲಕ್ಕೆ ಹೇಗೆ ಪ್ರಸ್ತುತವೋ, ಈ ಕಾಲಕ್ಕೂ ಅಷ್ಟೇ ಪ್ರಸ್ತುತ ಎಂಬುದು ಸಿನಿಮಾ ಪ್ರೇಮಿಗಳ ಮಾತು.

ನಟಿ ಚಾಂದಿನಿ ಎ ಸಿನಿಮಾದಲ್ಲಿ ಹೇಗಿದ್ದರೋ, ಈಗಲೂ ಹಾಗೆಯೇ ಇದ್ದಾರೆ. ಅದಕ್ಕವರು ನೀಡುವ ಕಾರಣವೇನು ಗೊತ್ತಾ?. ''ನನ್ನ ಜೀವನವನ್ನೇ ಬದಲಿಸಿದ ಸಿನಿಮಾ ಅದು. ಅದರಿಂದ ನನಗೆ ಸಿಕ್ಕಿದ್ದು ಎರಡು ವಿಚಾರಗಳು. ಒಂದು ಕನ್ನಡ ಜನರ ಪ್ರೀತಿ, ಮತ್ತೊಂದು ಆ ಸಿನಿಮಾದ ಫೇಮಸ್ ಡೈಲಾಗ್ "GOD IS GREAT" ನಂತೆ ಸಿಕ್ಕ ಆಶೀರ್ವಾದ. ನಾನಿಂದಿಗೂ A ಚಾಂದಿನಿ ರೀತಿಯೇ ಇದ್ದೇನೆ. ಕಾಲಘಟ್ಟವನ್ನೂ ಮೀರಿದ ಒಂದು ಅಪ್ರತಿಮ ಪ್ರೇಮ ಕಥೆ 'A' ಅಂತಾರೆ" ಚಾಂದಿನಿ.

ಉಪೇಂದ್ರ ನಿರ್ದೇಶನದ ಬಗ್ಗೆ ವರ್ಣಿಸಲು ಪದಗಳಿಲ್ಲ. ಅಂದಿಗೂ ಇಂದಿಗೂ ಉಪೇಂದ್ರ ನನ್ನ ಮೆಚ್ಚಿನ ನಿರ್ದೇಶಕ. ಗುರುಕಿರಣ್ ಸಂಗೀತದಲ್ಲಿ ಮೂಡಿಬಂದಿರುವ ಚಿತ್ರದ ಹಾಡುಗಳು ಈಗಲೂ ಜನಪ್ರಿಯ. ಕನ್ನಡಿಗರು ಎ ಚಿತ್ರದಿಂದ ಇಲ್ಲಿಯವರೆಗೂ ನನಗೆ ತೋರುತ್ತಿರುವ ಪ್ರೀತಿಗೆ ನಾನು ಚಿರಋಣಿ. ಇಂತಹ ಸೂಪರ್ ಹಿಟ್ ಚಿತ್ರದಲ್ಲಿ ನಟಿಸಲು ಅವಕಾಶ ನೀಡಿದ ನಿರ್ಮಾಪಕರಿಗೆ ಹಾಗೂ ನಿರ್ದೇಶಕರಿಗೆ ಧನ್ಯವಾದಗಳು. ಮೇ 17ರಂದು ಚಿತ್ರ ರೀ ರಿಲೀಸ್ ಆಗುತ್ತಿದೆ. ಈಗಲೂ ಭರ್ಜರಿ ಯಶಸ್ಸು ಕಾಣಲಿದೆ ಎಂದು ಚಾಂದಿನಿ ವಿಶ್ವಾಸ ವ್ಯಕ್ತಪಡಿಸಿದರು. ಇದರ ಜೊತೆಗೆ, ಒಳ್ಳೆಯ ಕಥೆ ಸಿಕ್ಕರೆ ಕನ್ನಡ ಚಿತ್ರಗಳಲ್ಲಿ ನಟಿಸುತ್ತೇನೆ ಎಂದು ಕೂಡ ತಿಳಿಸಿದ್ದಾರೆ.

 

Post a comment

No Reviews